ಯುಪಿ ಆಸ್ಪತ್ರೆಯಲ್ಲಿ ಬಾಲಕಿಯ ಮೃತದೇಹವನ್ನು ಎಳೆದು ತಿಂದ ಬೀದಿ ನಾಯಿ: ತನಿಖೆಗೆ ಆದೇಶ

0
470

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿದ್ದ ಬಾಲಕಿಯೊಬ್ಬಳ ಮೃತದೇಹವನ್ನು ಬೀದಿ ನಾಯಿ ಕಚ್ಚಿ ಎಳೆಯುತ್ತಿರುವ ವೀಡಿಯೊ ಹೊರ ಬಂದಿತ್ತು.ಇದು ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಘಟನೆಯಲ್ಲಿ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿದ್ದು, ಆಸ್ಪತ್ರೆಯ ವಾರ್ಡ್ ಮೇಲ್ವಿಚಾರ ಹಾಗೂ ಸ್ವಚ್ಛತಾ ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಘಟನೆ ನಡೆದಿತ್ತು. ಆಸ್ಪತ್ರೆಯ ವರಾಂಡದಲ್ಲಿ ಸ್ಟ್ರೆಕ್ಚರಿನಲ್ಲಿ ಮೃತದೇಹ ಇತ್ತು. ಬೀದಿ ನಾಯಿ ಅದನ್ನು ಕಚ್ಚಿ ಎಳೆಯುವುದಕ್ಕೆ ನೋಡಿದೆ.ಗುರುವಾರ ರಸ್ತೆ ಅಪಘಾತದಲ್ಲಿ ಬಾಲಕಿ ಮೃತಪಟ್ಟಿದ್ದಳು. ಆಸ್ಪತ್ರೆಗೆ ಕರೆತರುವ ಮೊದಲೇ ಬಾಲಕಿ ಮೃತಪಟ್ಟಿದ್ದಳು. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕುಟುಂಬ ರೋಷತಪ್ತವಾಗಿದ್ದು ಒಂದೂವರೆ ಗಂಟೆಗಳ ಕಾಲ ಯಾರೂ ಬಾಲಕಿಯ ಮೃತದೇಹದ ಬಳಿ ಬರಲಿಲ್ಲ ಎಂದು ತಂದೆ ಎಎನ್‍ಐಗೆ ತಿಳಿಸಿದ್ದರು.

ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ಉಪಟಳ ಮಿತಿ ಮೀರಿದೆ ಎಂದು ಮೇಲಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಸ್ಪತ್ರೆಗೆ ಸಂಬಂಧಪಟ್ಟವರು ತಿಳಿಸಿದರು. ಆಸ್ಪತ್ರೆಯ ವಿಧಿ ವಿಧಾನದ ಮುಗಿಸಿದ ಬಳಿ ಬಾಲಕಿಯ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು. ಪೋಸ್ಟ್ ಮಾರ್ಟ ವರದಿ ಇನ್ನಷ್ಟೇ ಬರಬೇಕಾಗಿದೆ. ಒಂದು ದೇಹ ಮೃತದೇಹದತ್ತ ಗಮನ ಬೇರೆಡೆಗೆ ಹರಿದಾಗ ಹೀಗಾಯಿತು ಎಂದು ಡಾ. ಸುಶೀಲ್ ಶರ್ಮ ಎಎನ್‍ಐಗೆ ಹೇಳಿದರು. ಈ ವೀಡಿಯೊವನ್ನು ಸಮಾಜವಾದಿ ಪಾರ್ಟಿ ಟ್ವೀಟ್‍ ಮಾಡಿದೆ. ಬೇಜವಾಬ್ದಾರಿತನದ ವಿರುದ್ಧ ಕ್ರಮ ಜರಗಿಸುವಂತೆ ಆಗ್ರಹಿಸಿದೆ.