ವಿಷನ್ 2026: ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 15 ಮನೆಗಳ ಹಸ್ತಾಂತರ

0
281

ಸನ್ಮಾರ್ಗ ವಾರ್ತೆ

ಅಸ್ಸಾಂನ ಬಾರ್ಪೆಟಾ ಜಿಲ್ಲೆಯ ಅತಿ ಹೆಚ್ಚು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗೋಬರ್ಧನ್ ಬ್ಲಾಕ್ ಒಂದಾಗಿದೆ. ಅಲ್ಲಿ ಸಂತ್ರಸ್ತರು ಭಾರಿ ನಷ್ಟವನ್ನು ಅನುಭವಿಸಿದ್ದು, ಬೃಹತ್ ಪ್ರಮಾಣದಲ್ಲಿ ಕೃಷಿ ಭೂಮಿ ಮತ್ತು ಮನೆಗಳು ನೀರಿನಲ್ಲಿ ಮುಳುಗಿದ್ದು ಭಾರಿ ನಷ್ಟ ಸಂಭವಿಸಿತ್ತು.

ವಿಷನ್ 2026 ಈ ಪ್ರದೇಶದಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದು, ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗಾಗಿ ನಿರ್ಮಿಸಲಾದ 15 ಮನೆಗಳನ್ನು ಹಸ್ತಾಂತರಿಸುವ ಮೂಲಕ ಪುನರ್ವಸತಿ ಚಟುವಟಿಕೆಗಳನ್ನು ಪೂರ್ಣಗೊಳಿಸಿದೆ.

ಅಸ್ಸಾಂನ ನಗರ ಪ್ರದೇಶದಲ್ಲಿ ನೆಲೆಗೊಂಡಿರುವ ಬಾರ್ಪೆಟಾ ಜಿಲ್ಲೆಯಲ್ಲಿರುವ 12 ಬ್ಲಾಕ್‌ಗಳಲ್ಲಿ ಗೋಬರ್ಧನ್ ಕೂಡ ಒಂದು. ಇಲ್ಲಿನ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿದ್ದು,  ಪುನರಾವರ್ತಿತ ಪ್ರವಾಹದಿಂದಾಗಿ ನಿವಾಸಿಗಳ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ನೂರಾರು ಜನರು ಪ್ರವಾಹದಿಂದ ಬಳಲುತ್ತಿದ್ದು, ಪ್ರವಾಹವು ಒಂದು ಬೃಹತ್ ಭೂ ಭಾಗವನ್ನು ಮುಳುಗಿಸಿದ ಪರಿಣಾಮವಾಗಿ ಸಂತ್ರಸ್ತರಿಗೆ ಮೂಲಭೂತ ಅಗತ್ಯಗಳು ಮತ್ತು ಆಶ್ರಯಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು ಕಷ್ಟಕರವಾಗಿತ್ತು.