ವ್ಯಭಿಚಾರ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್!

0
1852

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ರವರ ನೇತೃತ್ವದ ಐದು ನ್ಯಾಯಾಧೀಶರ ಪೀಠವು ಭಾರತೀಯ ದಂಡ ಸಂಹಿತೆಯ ವಿಧಿ 497 ಅಸಂವಿಧಾನಿಕ ಎಂದು ಘೋಷಿಸುವ ಮೂಲಕ ವಿಧಿ 497 ನ್ನು ರದ್ದುಪಡಿಸಿದೆ.

ವಿಧಿ 597ರ ಪ್ರಕಾರ ” ಒಬ್ಬ ವ್ಯಕ್ತಿಯು ತನಗೆ ಪರಿಚಯವಿರುವ ವ್ಯಕ್ತಿಯೊಬ್ಬನೊಂದಿಗೆ ಲೈಂಗಿಕ‌ ಸಂಬಂಧ ಹೊಂದಿದರೆ ಅಥವಾ ಆತ ಲೈಂಗಿಕ ಸಂಭೋಗ ಹೊಂದುವ ಮಹಿಳೆಯು ಇನ್ನೊಬ್ಬನ ಪತ್ನಿಯಾಗಿದ್ದು ಆಕೆಯ ಪತಿಯ ಅರಿವಿಗೆ ಬಾರದಂತೆ ಸಂಬಂಧವಿರಿಸಿದಲ್ಲಿ, ಅಂತಹ ಲೈಂಗಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸದೇ ವ್ಯಭಿಚಾರದ ಅಪರಾಧಕ್ಕೆ ಒಳಪಡುವುದು” ಎಂದಿತ್ತು.

ಇದಲ್ಲದೇ, ವ್ಯಭಿಚಾರದ ವ್ಯಾಪ್ತಿಗೆ ಒಳಪಟ್ಟಿದ್ದ ವಿಧಿ 198 ನ್ನು ಕೂಡಾ ಅಸಾಂವಿಧಾನಿಕ ಎಂದು ಪೀಠವು ಘೋಷಿಸಿತು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರವರ ನೇತೃತ್ವದಲ್ಲಿ ಜಸ್ಟೀಸ್ ಆರ್. ಎಫ್. ನಾರಿಮನ್, ಎ.ಎಂ.ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ ಹಾಗೂ ಇಂದು ಮಲ್ಹೋತ್ರಾರವರನ್ನು ಒಳಗೊಂಡ ಪೀಠವು ಈ ತೀರ್ಪನ್ನು ನೀಡಿದೆ.

” ವ್ಯಭಿಚಾರವು ವಿಚ್ಛೇದನಕ್ಕೆ ಎಡೆಮಾಡಿದೆಯೇ ಹೊರತು ಅದು ಅಪರಾಧವಲ್ಲ. ಪತಿಯೇ ಇಲ್ಲಿ ಒಡೆಯನೆಂದು ಹೇಳುವ ಸಮಯವು ಇದೀಗ ಉಳಿದಿಲ್ಲ. ಮಹಿಳೆಯರನ್ನು ಅಸಮಾನತೆಗೆ ಒಳಪಡಿಸುವ ಯಾವುದೇ ವಿಧಿಯು ಅಸಂವಿಧಾನಿಕವಾಗಿದೆ” ಎಂದು ಮುಖ್ಯನ್ಯಾಯ ಮೂರ್ತಿ ದೀಪಕ್ ಮಿಶ್ರಾರವರು ಲಿವ್ ಲಾ ಗೆ ತಿಳಿಸಿದ್ದಾರೆ.

” ಮಹಿಳೆಯ ಸ್ವಾಭಿಮಾನ ,ಸಂಸ್ಥೆಗಳು ಹಾಗೂ ಘನತೆಗೆ ಸೆಕ್ಷನ್ 497 ಕುಂದುಂಟುಮಾಡುತ್ತದೆ. ವ್ಯಭಿಚಾರವು ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಅಪಾರಾಧವಾಗುತ್ತದೆ. ಅಲ್ಲದೇ ಮಹಿಳಯು ಈ ವ್ಯವಸ್ಥೆಯಲ್ಲಿ ತನ್ನ ಧ್ವನಿಯನ್ನು ಇಲ್ಲಿ ಕಳೆದುಕೊಳ್ಳುತ್ತಾಳೆ, ವಿವಾಹದ ನಂತರ ಆಕೆ ವಿಧಿ 497 ರ ಅನ್ವಯ ನಿರಂಕುಶ ಪ್ರಭುತ್ವದಲ್ಲಿ ಬಂಧಿಯಾಗುವ ಸಂಭವಗಳೇ ಅಧಿಕ” ಎಂದು ತೀರ್ಪು ಜಸ್ಟೀಸ್ ಚಂದ್ರಚೂಡಾರವರು ಹೇಳಿದ್ದಾರೆ.

” ಪತ್ನಿಯ ಮೇಲೆ ಇತರೆ ವ್ಯಕ್ತಿಯು ಅತ್ಯಾಚಾರ ವ್ಯಸಗಿದಲ್ಲಿ ಅದು ಅತ್ಯಾಚಾರದ ಅಪರಾಧಕ್ಕೆ ಒಳಪಡುತ್ತದೆ. ಆದರೆ ಮಹಿಳೆಯ ಒಪ್ಪಿಗೆಯ ಮೇರೆಗೆ ಸಂಬಂಧವನ್ನು ಹೊಂದಿದ್ದಲ್ಲಿ ಅದು ಹೇಗೆ ಅಪರಾಧಾರ್ಹವಾಗುತ್ತದೆ? ಇಬ್ಬರು ವಯಸ್ಕರ ನಡುವೆ ಒಪ್ಪಿಗೆ ಅಥವಾ ಸಮ್ಮತಿ ಇರುವಾಗ ಪತ್ನಿಯ ಪ್ರೇಮಿಯನ್ನು ಯಾಕೆ ಶಿಕ್ಷಗೊಳಪಡಿಸಬೇಕು? ” ಎಂದು ಸಿಜೆಐ ಮಿಶ್ರಾರವರು ಆಗಸ್ಟ್ ವಿಚಾರಣೆಯಲ್ಲಿ ಪ್ರಶ್ನಿಸಿದ್ದರು.

ವಸಾಹತು ಯುಗದಲ್ಲಿ ವ್ಯಭಿಚಾರಕ್ಕೆ ಐದು ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ತದನಂತರ ಈ ನಿಯಮವನ್ನು 1860 ರ ಅವಧಿಯಲ್ಲಿ ತಿದ್ದುಪಡಿಗೊಳಪಡಿಸಲಾಯ್ತು. ಆದರೆ ಈ ವಿಧಿಯಂತೆ ಪತ್ನಿಯನ್ನು ಶಿಕ್ಷೆಗೊಳಪಡಿಸಲಾಗುತ್ತಿರಲಿಲ್ಲ.