300 ಇಲೆಕ್ಟ್ರಾಲ್ ಮತಗಳನ್ನೂ ಪಡೆದು ನಾವು ಗೆಲ್ಲುತ್ತೇವೆ- ಬೈಡನ್

0
165

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.7: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ 300 ಇಲೆಕ್ಟ್ರಾಲ್ ಮತಗಳನ್ನು ಪಡೆದು ಗೆಲ್ಲುವೆ ಎಂದು ಡೆಮಕ್ರಾಟಿಕ್ ಅಭ್ಯರ್ಥಿ ಜೊ ಬೈಡನ್ ಹೇಳಿದ್ದಾರೆ.

ಡೆಮಕ್ರಾಟಿಕ್ ಕಾರ್ಯಕರ್ತರು ಶಾಂತವಾಗಿರಿ ಎಂದು ಬೈಡನ್ ಮನವಿ ಮಾಡಿದರು. ಅಮೆರಿಕದ ಎಲ್ಲ ಕಡೆ ಕೆಲಸ ಮಾಡಿದ್ದಿರಿ ನನಗೆ ಹೆಮ್ಮೆಇದೆ ಎಂದು ಹೇಳಿದರು. ಬೈಡನ್ ಗೆಲುವು ನಿಶ್ಚಿತವೆನಿಸಿಕೊಂಡ ಕೂಡಲೇ ಅಭಿಮಾನಿಗಳು ಸಂತೋಷ ಆಚರಿಸುವ ಸಲುವಾಗಿ ರಸ್ತೆಗಿಳಿದಿದ್ದರು. ಗೆದ್ದವರು ನಾವೇ ಎಂದು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಿಗರೂ ಬೀದಿಗಿಳಿದಿದ್ದಾರೆ.

ಇನ್ನು ನಾಲ್ಕು ರಾಜ್ಯಗಳಿಂದ ಫಲಿತಾಂಶ ಬರಬೇಕಿದೆ. ಪೆನ್ಸಿಲ್ವೇನಿಯ, ಅರಿಝೋನ, ನೊವಾಡ, ಜಾರ್ಜಿಯದಲ್ಲಿ ಮತ ಎಣಿಕೆಯು ಪ್ರಗತಿಯಲ್ಲಿದೆ. 20 ಇಲೆಕ್ಟ್ರಾಲ್ ಮತಗಳು ಪೆನ್ಸಲ್ವೇನಿಯದಲ್ಲಿ ಇದ್ದು ಬೈಡನ್ ಇಲ್ಲಿ ಗೆದ್ದರೆ ಬೈಡನ್ ಅಧ್ಯಕ್ಷರಾಗಲಿದ್ದಾರೆ.