ಇತರ ಧರ್ಮೀಯರನ್ನು ಸ್ವಾಗತಿಸಿದ 170 ವರ್ಷ ಹಳೆಯ ಮಸೀದಿ

0
542

ಸನ್ಮಾರ್ಗ ವಾರ್ತೆ

ಬೆಂಗಳೂರು, ಜ. 20: ನಗರದ 170 ವರ್ಷ ಹಳೆಯ ಮಸೀದಿಯನ್ನು ಇತರ ಧರ್ಮೀಯರಿಗೆ ತೆರೆಯಲಾಗಿದೆ. ಬೆಂಗಳೂರಿನ ನಗರದ ಮೋದಿ ಮಸೀದಿಯಲ್ಲಿ ರವಿವಾರ ಮುಸ್ಲಿಮೇತರರಿಗೂ ಪ್ರವೇಶ ನೀಡಲಾಯಿತು.

‘ನನ್ನ ಮಸೀದಿ ಸಂದರ್ಶನ ದಿನ ಎಂಬ ಹೆಸರಿನಲ್ಲಿ ರಹ್ಮತ್ ಗ್ರೂಪ್ ಮುಸ್ಲಿಮೇತರರಿಗೆ ಮಸೀದಿ ಸಂದರ್ಶಿಸುವ ಅವಕಾಶವನ್ನು ಒದಗಿಸಿದೆ. ಒಗ್ಗಟ್ಟನ್ನು ಕಾಪಾಡುವುದು ಎಂಬ ಸಂದೇಶವನ್ನು ಈ ಮೂಲಕ ಸಂಘಟಕರು ರವಾನಿಸುತ್ತಿದ್ದಾರೆ. ರವಿವಾರ ಮಹಿಳೆಯರ ಸಹಿತ 400 ಮಂದಿ ಮುಸ್ಲಿಮೇತರರು ಮಸೀದಿಯನ್ನು ಸಂದರ್ಶಿಸಿದರು. ಪ್ರಾರ್ಥನೆಯ ನಂತರ ನಡೆದ ಔತಣದಲ್ಲಿ ಭಾಗಿಯಾದರು. ಸಿಖ್ ವಿಭಾಗದವರು ಮಸೀದಿ ಸಂದರ್ಶಿಸಿದ್ದಾರೆ. ಇಸ್ಲಾಮೀ ಸಂಸ್ಕøತಿಯ ಕುರಿತು ಇತರ ಧರ್ಮೀಯರಿಗೆ ತಿಳಿಸುವುದು ನಮ್ಮ ಉದ್ದೇಶ ಎಂದು ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ.