ಅಲ್ಪಸಂಖ್ಯಾತ ಸಮುದಾಯಕ್ಕೆ ಮುಖ್ಯಮಂತ್ರಿಯವರ ಅಭಯ; ದಾರಿಮಿ ಉಲಮಾ ಒಕ್ಕೂಟ ಸ್ವಾಗತ

0
234

ಸನ್ಮಾರ್ಗ ವಾರ್ತೆ

ನಿಜಾಮುದ್ದೀನ್ ಪ್ರಕರಣವನ್ನು ಮುಂದಿಟ್ಟು ಒಂದು ಸಮುದಾಯದ ವಿರುದ್ದ ವ್ಯಾಪಕ ಅಪಪ್ರಚಾರದಲ್ಲಿ ತೊಡಗಿಸುತ್ತಾ ದೇಶದ ಪ್ರಜೆಗಳ ಮದ್ಯೆ ಕೊರೋನಾದ ನೆಪದಲ್ಲಿ ದ್ವೇಷ ಬಿತ್ತುವ ಕಿಡಿಗೇಡಿಗಳ ವಿರುದ್ದ ರಾಜ್ಯದ ಮುಖ್ಯಮಂತ್ರಿ ಕಿಡಿಕಾರಿದ್ದು ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅಲ್ಪ ಸಂಖ್ಯಾತ ಮುಸ್ಲಿಮರಿಗೆ ಅಭಯ ನೀಡಿದ್ದಾಗಿ ವರದಿಯಾಗಿದೆ. ಯಡಿಯೂರಪ್ಪರ ಈ ನಿಲುವು ಅತ್ಯಂತ ಸ್ವಾಗತಾರ್ಹವೂ ರಾಜಧರ್ಮದ ಹಾದಿಯಲ್ಲಿ ಇದೊಂದು ದಿಟ್ಟ ಹೆಜ್ಜೆಯೂ ಆಗಿದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಟಿದೆ.

ಅದೇ ರೀತಿ ಕೊರಾನ ನಿರ್ಮೂಲನೆಯ ಬಗ್ಗೆ ಸರಕಾರದ ಜೊತೆ ಎಲ್ಲಾ ರೀತಿಯಲ್ಲೂ ಮುಸ್ಲಿಂ ಸಮುದಾಯ ಕೈ ಜೋಡಿಸಿದ್ದು ಮುಂದೆಯೂ ಇದನ್ನು ನಿರೀಕ್ಷಿಸ ಬಹುದಾಗಿದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅದ್ಯಕ್ಷ ಎಸ್ ಬಿ ದಾರಿಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.