ಪ.ಬಂಗಾಳ ಸಂಪೂರ್ಣ ಲಾಕ್‌ಡೌನ್: ಕೊಲ್ಕತಾ ವಿಮಾನ ನಿಲ್ದಾಣ ಬಂದ್

0
123

ಸನ್ಮಾರ್ಗ ವಾರ್ತೆ

ಕೊಲ್ಕತಾ,ಜು.30: ಕೊರೋನ ವ್ಯಾಪನದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದ್ದು, ಈ ಪರಿಸ್ಥಿತಿಯಿಂದಾಗಿ ಕೊಲ್ಕತಾ ವಿಮಾನ ನಿಲ್ದಾಣವನ್ನು ಮುಚ್ಚಿಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 31ರವರೆಗೆ ವಾರದಲ್ಲಿ ಎರಡು ದಿವಸ ಸಂಪೂರ್ಣ ಲಾಕ್‍ಡೌನ್ ಪಶ್ಚಿಮ ಬಂಗಾಳ ಸರಕಾರ ತೀರ್ಮಾನಿಸಿದೆ. ಆಗಸ್ಟ್‍ನಲ್ಲಿ ಕೊಲ್ಕತಾ ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏಳು ದಿವಸಗಳ ಕಾಲ ಮುಚ್ಚಿಡಲಾಗುವುದು.

ಆಗಸ್ಟ್‌ನಲ್ಲಿ 5,8,16,17,23,24,31ದಿನಾಂಕಗಳಂದು ವಿಮಾನ ನಿಲ್ದಾಣವನ್ನು ಬಂದ್ ಮಾಡುವುದು ಎಂದು ಸುದ್ದಿ ಸಂಸ್ಥೆ ಎನ್‍ಐಒ ಟ್ವೀಟ್ ಮಾಡಿದೆ. ವಿಮಾನ ವೇಳಾ ಪಟ್ಟಿ ಬದಲಾಣೆಗೆ ವಿಮಾನ ಕಂಪೆನಿಗಳನ್ನು ಸಂಪರ್ಕಿಸಬೇಕೆಂದು ಸೂಚನೆ ನೀಡಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here