ವಾಟ್ಸ್‌ಆ್ಯಪ್‌ ವಿಡಿಯೋ ಕಾಲ್ ಮೂಲಕ ನೀಡಿದ ವಿಚ್ಛೇದನಕ್ಕೆ ನ್ಯಾಯಾಲಯದಿಂದ ಹಸಿರು ನಿಶಾನೆ!

0
721

ನಾಗ್ಪುರ (ಮಹಾರಾಷ್ಟ್ರ):  ವಾಟ್ಸ್‌ ಆ್ಯಪ್ ವಿಡಿಯೋ ಕಾಲ್‌ ಮೂಲಕ  ವಿವಾಹ ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯವು ಹಸಿರು ನಿಶಾನೆ ನೀಡಿದ  ಪ್ರಕರಣವೊಂದು  ನಾಗ್ಪುರದಲ್ಲಿ ವರದಿಯಾಗಿದೆ.

ದಂಪತಿಗಳು ಮೂಲತಃ ನಾಗ್ಪುರದವರಾಗಿದ್ದು 2013 ರಿಂದ 2017 ರವರೆಗೆ  ಅಮೇರಿಕಾದ ಮಿಷಿಗನ್‌ ನಲ್ಲಿ ಒಟ್ಟಿಗೆ ನೆಲೆಸಿದ್ದರು. ಈ ಇಬ್ಬರ ನಡುವೆ ಬಿರುಕು ಮೂಡಿದ್ದು ಪತಿ-ಪತ್ನಿ ಇಬ್ಬರು ಬೇರ್ಪಟ್ಟು ನೆಲೆಸಿದ್ದರಾದರೆ ಪತಿಯು(37) ನಾಗ್ಪುರ್ ಗೆ ತೆರಳಿ ಕೌಂಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಪತ್ನಿಯೂ ಕೂಡ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದ್ದು ಸಂಬಂಧಪಟ್ಟ ದಾಖಲೆಗಳನ್ನು ನಾಗ್ಪುರ್ ಗೆ ತಲುಪಿಸಿದ್ದರು.

ಪ್ರಕರಣದ ವಿಚಾರಣೆಗೆ ಪತ್ನಿಯು(35) ವೀಸಾ ಕಾರಣಗಳಿಂದಾಗಿ ಬರಲಾಗದೆಂದೂ ವಾಟ್ಸಪ್ ಕರೆಯ ಮೂಲಕ ತಾನು ನ್ಯಾಯಾಲಯದ ಉಪಸ್ಥಿತಿಯನ್ನು ಕಾಯ್ದುಕೊಳ್ಳುವುದಾಗಿ ತಿಳಿಸಿದ್ದರಿಂದ ನ್ಯಾಯಾಲಯವು ಇದಕ್ಕೆ ಅನುಮತಿ ಸೂಚಿಸಿತ್ತು.  ನ್ಯಾಯಾಧೀಶರು, ವಕೀಲರು ಮತ್ತು ಪತಿಯ ಉಪಸ್ಥಿತಿಯಲ್ಲಿ  ವಿಡಿಯೋ ಕಾಲ್ ಮೂಲಕ ಪತ್ನಿಯ ವಿಚಾರಣೆಯನ್ನು  ನ್ಯಾಯಾಲಯವು ನಡೆಸಿದ್ದು ಪರಿಹಾರ ಧನವಾಗಿ ಹತ್ತು ಲಕ್ಷ ರೂಪಾಯಿ ನೀಡುವುದಾದಲ್ಲಿ ವಿಚ್ಛೇದನಕ್ಕೆ ಅನುಮತಿ ಸೂಚಿಸುವುದಾಗಿ ಪತ್ನಿಯು ಒಪ್ಪಿಕೊಂಡಿದ್ದಳು.ಇದರಂತೆಯೇ ಪತಿಯು ಪರಿಹಾರ ಧನವಾಗಿ ಹತ್ತು ಲಕ್ಚ ರೂಪಾಯಿ ನೀಡಲು ಸಮ್ಮತಿಸಿರುವುದರಿಂದ ನ್ಯಾಯಾಲಯವು ವಿಚ್ಛೇದನ ಪ್ರಕರಣಕ್ಕೆ ರುಜುವಾತು ಹಾಕಿದೆ.

ಎರಡೂ ಕಡೆಯ ಒಪ್ಪಿಗೆ ಕೇಳಿದ ನ್ಯಾ.ಸ್ವಾತಿ ಚೌಹಾಣ್‌ ಅವರು, ಪತಿಯು ಮಹಿಳೆಗೆ ಹತ್ತು ಲಕ್ಷ ರೂ. ನೀಡಬೇಕು ಎಂಬ ಷರತ್ತಿನ ಮೇರೆಗೆ ಜನವರಿ 14ರಂದು ವಿಚ್ಛೇದನ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ.

ಐದು ವರ್ಷಗಳ ಹಿಂದೆ ಸಿಕಂದರಾಬಾದ್‌ನಲ್ಲಿ ಈ ಎಂಜಿನಿಯರ್‌ ದಂಪತಿಗಳ ವಿವಾಹವಾಗಿದ್ದು. ಅಮೆರಿಕ ಮೂಲದ ಆಟೋ ಮೊಬೈಲ್‌ ಕಂಪನಿಯಲ್ಲಿ ಉದ್ಯೋಗ ಹೊಂದಿದ್ದರು. ಅಮೆರಿಕದ ವೀಸಾ ಅವಧಿ ಮುಗಿದ ನಂತರ  ನಾಗ್ಪುರದಲ್ಲಿನ ತನ್ನ ಅತ್ತೆ-ಮಾವನ ಜತೆಗೆ ವಾಸವಾಗಿದ್ದ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟಿರುವುದಾಗಿ ತಿಳಿದು ಬಂದಿದ್ದು,  ನಂತರ ವಿದ್ಯಾರ್ಥಿ ವೀಸಾದ ಮೇಲೆ ಪತ್ನಿಯು ಪುನಃ ಅಮೆರಿಕಗೆ ತೆರಳಿದ್ದರು. ವಿಚ್ಛೇದನದ ವೇಳೆ ಈ ಕಾರಣಗಳನ್ನು ದಂಪತಿಗಳು ತಿಳಿಸದೇ; ಪತ್ನಿಗೆ  ದೀರ್ಘಕಾಲ ರಜಾ ಅವಧಿ ಸಿಗದೇ ಇರುವುದನ್ನೂ ಭೌಗೋಳಿಕ ದೂರತೆಯನ್ನೂ ಕಾರಣವಾಗಿರಿಸಿ ವಿಚ್ಛೇದನ ಪಡೆಯಲಾಗಿದೆ ಎಂಬ ಸುದ್ದಿಯು ಕೇಳಿ ಬರುತ್ತಿದೆ.