2021ರ ಜೂನ್ ವರೆಗೆ ಉಚಿತ ಪಡಿತರ ಘೋಷಿಸಿದ ಪ.ಬಂಗಾಳ ಸರಕಾರ; ನಮ್ಮ ಧಾನ್ಯದ ಗುಣಮಟ್ಟ ಕೇಂದ್ರಕ್ಕಿಂತ ಉತ್ತಮವಾಗಿರುತ್ತದೆ ಎಂದ ಮಮತಾ ಬ್ಯಾನರ್ಜಿ

0
198

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ,ಜೂ.30: ಬಡ ಕುಟುಂಬಗಳಿಗೆ ಉಚಿತ ಪಡಿತರ ನೀಡುವ ಯೋಜನೆಯನ್ನು ಮುಂದಿನ 5 ತಿಂಗಳವರೆಗೆ ಅಂದರೆ ನವೆಂಬರ್ ವರೆಗೆ ಮುಂದುವರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರಕ್ಕೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಇದಾದ ಸ್ವಲ್ಪ ಸಮಯದ ನಂತರ, ಮಮತಾ ಸರ್ಕಾರವು ಮುಂದಿನ 12 ತಿಂಗಳವರೆಗೆ ಅಂದರೆ, ಜೂನ್ 2021ರವರೆಗೆ ತನ್ನ ರಾಜ್ಯದಲ್ಲಿ ಉಚಿತ ಪಡಿತರವನ್ನು ನೀಡುವುದಾಗಿ ಘೋಷಿಸಿತು. ನಮ್ಮ ರಾಜ್ಯದಲ್ಲಿ ನೀಡಲಾಗುವ ಆಹಾರ ಧಾನ್ಯಗಳ ಗುಣಮಟ್ಟ ಕೇಂದ್ರಕ್ಕಿಂತ ಉತ್ತಮವಾಗಿರುತ್ತದೆ ಎಂದು ಅವರು ಹೇಳಿದರು.

ಕೇಂದ್ರವು ನಮಗೆ ನೀಡುವ ಪಡಿತರವು ಬಂಗಾಳದ 60% ಜನರಿಗೆ ಮಾತ್ರ ಲಭ್ಯವಿದೆ. ಅಂತಹ ತಾರತಮ್ಯವೇಕೆ? ದೇಶದ 130 ದಶಲಕ್ಷ ಜನರಿಗೆ ಉಚಿತ ಪಡಿತರ ನೀಡಬೇಕು ರಂದು ಅವರು ಆಗ್ರಹಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here