ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಬರಬೇಡಿ: ಕೇಂದ್ರ ಸರಕಾರವನ್ನು ಬೆಂಬಲಿಸಿ ಪಿಟಿ ಉಷಾ ಟ್ವೀಟ್

0
430

ಸನ್ಮಾರ್ಗ ವಾರ್ತೆ

ಕಣ್ಣೂರ್,ಫೆ.4: ರೈತ ಹೋರಾಟಕ್ಕೆ ಸಂಬಂಧಿಸಿದ ವಿವಾದದಲ್ಲಿ ಓಟದ ತಾರೆ ಪಿಟಿ ಉಷಾ ಕೇಂದ್ರ ಸರಕಾರವನ್ನು ಬೆಂಬಲಿಸಿದ್ದು ನಮ್ಮ ಸಂಸ್ಕೃತಿ, ಪರಂಪರೆಗೆ ನಾವು ತುಂಬ ಹೆಚ್ಚು ಅಭಿಮಾನಪಡುತ್ತೇವೆ. ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಬರಬೇಡಿ ಎಂದು ಪಿಟಿ ಉಷಾ ಟ್ವೀಟ್ ಮಾಡಿದ್ದಾರೆ.

ಭಾರತ ಪ್ರಜಾಪ್ರಭುತ್ವದ ಉತ್ತಮ ಮಾದರಿಯಾಗಿದೆ. ನಮ್ಮ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕೆಂದು ನಮಗೆ ಗೊತ್ತಿದೆ. ಯಾಕೆಂದರೆ ಜಗತ್ತಿನಲ್ಲಿ ನಾಯತ್ವದಲ್ಲಿ ಏಕತ್ವ ಹೊಂದಿರುವ ಏಕೈಕ ದೇಶ ಭಾರತವಾಗಿದೆ ಎಂದು ಪಿಟಿ ಉಷಾ ಹೇಳಿದರು.

ಕೇಂದ್ರ ಪಾಸು ಮಾಡಿದ ಕೃಷಿ ಕಾನೂನು ವಿರುದ್ಧ ಎರಡು ತಿಂಗಳಿನಿಂದ ಹೋರಾಟ ಮಾಡುತ್ತಿರುವ ರೈತರನ್ನು ಬೆಂಬಲಿಸಿ ಪಾಪ್ ಗಾಯಕಿ ರಿಹಾನ್ನಾ, ಸ್ವೀಡಿಶ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‍ಬರ್ಗ್, ಕಮಲಾ ಹ್ಯಾರಿಸ್‍ರ ಸಹೋದರಿ ಪುತ್ರಿ ಮೀನಾ ಹ್ಯಾರಿಸ್ ಕೇಂದ್ರ ಸರಕಾರವನ್ನು ಟೀಕಿಸಿ ಟ್ವೀಟ್ ಮಾಡಿದ ಬೆನ್ನಿಗೆ ಕೇಂದ್ರ ಸರಕಾರವನ್ನು ಬೆಂಬಲಿಸಿ ಭಾರತೀಯ ಬಾಲಿವುಡ್ ಸಿನೆಮಾ ತಾರೆಯರು, ಕ್ರಿಕೇಟಿಗರು ಸೇರಿದಂತೆ ಕ್ರೀಡಾಳುಗಳು ಟ್ವಿಟರ್‌ನಲ್ಲಿ ದೇಶದಲ್ಲಿ ಏಕತೆಯನ್ನು ಸಾರೋಣ ಎಂಬ ಟ್ರೆಂಡ್‌ನ್ನು ಆರಂಭಿಸಿದ್ದಾರೆ.