ಕಂಗನಾ ಯಾಕೆ ಹಿಮಾಚಲ ಪ್ರದೇಶದ ಡ್ರಗ್ಸ್ ಮಾಫಿಯದ ವಿರುದ್ಧ ಹೋರಾಡುವುದಿಲ್ಲ- ಊರ್ಮಿಳಾ ಮಾತೊಂಡ್ಕರ್ ಟೀಕೆ

0
391

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.16: ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ, ಬಾಲಿವುಡ್‍ನ ಮಾದಕವಸ್ತು ಉಪಯೋಗದ ಕುರಿತು ಆರೋಪ ಹೊರಿಸಿ ವಿವಾದ ಸೃಷ್ಟಿಸಿದ ಕಂಗನಾ ರಾಣಾವತ್‍ರ ವಿರುದ್ಧ ನಟಿ ಮಾಜಿ ಕಾಂಗ್ರೆಸ್ ನಯಕಿ ಊರ್ಮಿಳಾ ಮಾತೊಂಡ್ಕರ್ ಟೀಕಿಸಿದ್ದಾರೆ.

ಕಂಗನಾ ತಾನು ಬಲಿಪಶು ಎಂದು, ಮಹಿಳೆಯೆಂದೂ ಹೇಳುತ್ತಿದ್ದಾರೆ. ಆದರೆ ಅವರು ಮೊದಲು ತನ್ನ ರಾಜ್ಯ ಹಿಮಾಚಲ ಪ್ರದೇಶದ ಡ್ರಗ್ಸ್ ಮಾಫಿಯದ ವಿರುದ್ಧ ಹೋರಾಡಲಿ ಎಂದು ಮಾತೊಂಡ್ಕರ್ ಸಲಹೆ ನೀಡಿದ್ದಾರೆ.

ಊರ್ಮಿಳಾ ಇಂಡಿಯ ಟುಡೆಯ ಮರಾಠಿ ವೆಬ್‍ಚ್ಯಾನೆಲ್‍ನೊಂದಿಗೆ ಮಾತಾಡುತ್ತಿದ್ದರು. ಡ್ರಗ್ಸ್ ಸಮಸ್ಯೆ ಇಡೀ ದೇಶದಲ್ಲಿದೆ. ಹಿಮಾಚಲ ಡ್ರಗ್ಸ್ ಉದ್ಭವ ಸ್ಥಾನವೆಂದು ಕಂಕನರಿಗೆ ಗೊತ್ತಿದೆಯೇ. ಅವರು ಮೊದಲು ತನ್ನ ಸ್ವಂತ ರಾಜ್ಯದಿಂದ ಆರಂಭಿಸಲಿ ಎಂದು ಊರ್ಮಿಳಾ ಟೀಕಿಸಿದರು.

ಮಾದಕವಸ್ತು ಶೃಂಖಲೆಗೆ ಸಂಬಂಧಿಸಿದ ವಿವರಗಳನ್ನು ಪೊಲೀಸರಿಗೆ ಹಸ್ತಾಂತರಿಸಿಲ್ಲ. ಅವರು ಜನರ ಹಣದಿಂದ ವೈಪ್ಲಸ್ ಸುರಕ್ಷೆ ಪಡೆಯುತ್ತಿದ್ದಾರೆ ಎಂದು ಊರ್ಮಿಳಾ ಹೇಳಿದರು. ಮುಂಬೈ ನಗರದ ವಿರುದ್ಧ ಕಂಗನಾ ನೀಡಿದ ವಿವಾದ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

ಮುಂಬೈ ವಿರುದ್ಧ ಅಂತಹ ಹೇಳಿಕೆ ನೀಡುವಾಗ ಆ ನಗರ ಮಾತ್ರವಲ್ಲ ಆ ರಾಜ್ಯದ ಜನರನ್ನು ಕೂಡ ನೀವು ಅಪಮಾನಿಸಿದ್ದೀರಿ ಎಂದು ಊರ್ಮಿಳಾ ಹೇಳಿದರು. ಜಯಾ ಬಚ್ಚನ್‍ರಂತಹವರಲ್ಲಿ ಯಾರೂ ಆ ರೀತಿ ಪ್ರತಿಕ್ರಿಯಿಸಲಾರರು. ಆದರೂ ಕಂಗನಾರ ಪಾಲಿ ಹಿಲ್‍ನ ಕಚೇರಿ ಕಟ್ಟಡ ಬಿಎಂಸಿ ಕೆಡವಿದ ಕಾರ್ಯವನ್ನು ಒಪ್ಪುವುದಿಲ್ಲ ಎಂದೂ ಹೇಳಿದ ಊರ್ಮಿಳಾ ಈ ವಿಷಯದಲ್ಲೆಲ್ಲ ಮಾತಾಡಿದರೆ ದೊಡ್ಡ ಬೆಲೆ ತೆರಬೇಕಾದೀತೆಂದು ಬಾಲಿವುಡ್ ತಾರೆಗಳು ಪ್ರತಿಕ್ರಿಯೆಗೆ ಮುಂದಾಗಿಲ್ಲ ಎಂದು ಊರ್ಮಿಳಾ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here