ಅಧಿಕಾರಕ್ಕೆ ಬಂದರೆ 11 ಮಿಲಿಯನ್ ಅಕ್ರಮ ವಲಸಿಗರಿಗೆ ಪೌರತ್ವ: ಅಮೇರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್

0
502

ಸನ್ಮಾರ್ಗ ವಾರ್ತೆ

ಅಮೇರಿಕಾ: ಒಂದು ವೇಳೆ ಅಮೇರಿಕಾದ ನೂತನ ಅಧ್ಯಕ್ಷನಾಗಿ ಚುನಾವಣೆಯಲ್ಲಿ ವಿಜಯಿಯಾದರೆ 11 ಮಿಲಿಯನ್ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದಾಗಿ ಅಮೇರಿಕಾದ ಪ್ರಜಾಪ್ರಭುತ್ವದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅವರು ಅಮೇರಿಕಾದ ಜನರಿಗೆ ಭರವಸೆ ನೀಡಿದ್ದಾರೆ.

“ಕೊರೋನಾ ವೈರಸ್‌ಅನ್ನು ಸೋಲಿಸುವುದು, ಆರ್ಥಿಕತೆಯನ್ನು ಪುನರ್ನಿರ್ಮಿಸುವುದು ಮತ್ತು ಪ್ರಪಂಚದಾದ್ಯಂತ ಅಮೇರಿಕಾದ ನಾಯಕತ್ವವನ್ನು ಹೇಗೆ ಪುನಃಸ್ಥಾಪಿಸುವುದು ಎಂಬುದನ್ನು ಕಂಡುಹಿಡಿಯುವುದರ ಜೊತೆಗೆ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದು ಕೂಡ ನಮ್ಮ ಆದ್ಯತೆಗಳಲ್ಲಿ ಒಂದಾಗಿದೆ” ಎಂದು ಜೋ ಬೈಡನ್ ಹೇಳಿದ್ದಾರೆ.

ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯು 2020ರ ನವೆಂಬರ್ 3 ರಂದು ನಡೆಯಲಿದ್ದು, ಪ್ರಸ್ತುತ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬೈಡನ್ ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.