ಕಠಿಣ ಚಳಿಗಾಲ: ಫೆಲಸ್ತೀನಿಯರೊಂದಿಗೆ ಕೈ ಜೋಡಿಸಿದ ಕತಾರ್

0
358

ಸನ್ಮಾರ್ಗ ವಾರ್ತೆ

ದೋಹ,ಡಿ.29: ವಿಶ್ವಸಂಸ್ಥೆಯ ರಿಲೀಫ್ ವರ್ಕ್ ಏಜೆನ್ಸಿಯೊಂದಿಗೆ ಸೇರಿ ಕತಾರ್‌ನ ರೆಡ್‍ ಕ್ರೆಸೆಂಟ್ 2020-21ರ ಚಳಿಗಾಲದಲ್ಲಿ ಫೆಲಸ್ತೀನಿಯರಿಗೆ ಸಹಾಯ ದೃಢಪಡಿಸಲು ಜಂಟಿ ಮಾನವೀಯ ಅಭಿಯಾನವನ್ನು ನಡೆಸಲಿದೆ. ಕತಾರ್ ರೆಡ್‍ ಕ್ರೆಸೆಂಟ್ ಇದಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಬಂದಿದೆ. ರೆಡ್‍ ಕ್ರಸೆಂಟ್‍ನ ಜನರಲ್ ಅಂಬಾಸಿಡರ್ ಅಲಿಬಿನ್ ಅಲ್ ಹಸನ್ ಅಲ್ ಹಮ್ಮಾದಿ ಮತ್ತು ವಿಶ್ವಸಂಸ್ಥೆಯ ರಿಲೀಫ್ ಏಜೆನ್ಸಿ ಕಮಿಶನರ್ ಜನರಲ್ ಫಿಲಿಫ್ ಲಸಾರಿನಿ ಸಹಿ ಹಾಕಿದ್ದು ಡಿಗ್ನಿಟಿ ಈಸ್ ಪ್ರೈಸ್‍ಲೆಸ್ ಎಂಬ ವಿಷಯದಲ್ಲಿ 1.1 ಮಿಲಿಯನ್ ಡಾಲರ್ ಅನ್ನು ಫೆಲಸ್ತೀನಿಯರಿಗಾಗಿ ಸಂಗ್ರಹಿಸುವ ಗುರಿಯಿರಿಸಲಾಗಿದೆ.

ಕಠಿಣ ಚಳಿಯಿಂದ ಲಕ್ಷಾಂತರ ಫೆಲಸ್ತೀನಿಯರು ಕಷ್ಟ ಪಡುತ್ತಿದ್ದು ಇದಕ್ಕಾಗಿ ಹಲವಾರು ಚಳಿಗಾಲಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅಭಿಯಾನದ ವೇಳೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಕತರ್ ರೆಡ್‍ಕ್ರಸಂಟ್ ತಿಳಿಸಿದೆ. ಗಾಝ, ವೆಸ್ಟ್‌ಬ್ಯಾಂಕ್, ಜರುಸಲೇಂಗಳಲ್ಲಿರುವ ಕತಾರ್ ರೆಡ್‍ ಕ್ರೆಸಂಟ್ ವಿಭಾಗಗಳಿಗೆ ಸಹಕರಿಸಿ ವಿಶ್ವಸಂಸ್ಥೆಯ ರಿಲೀಫ್ ವರ್ಕ್ ಏಜೆನ್ಸಿ ಅಭಿಯಾನವನ್ನು ಜಾರಿಗೊಳಿಸಲಿದೆ.

ಚಳಿ ತಡೆಯುವ ಶೆಲ್ಟರ್‍ಗಳು, ಆಹಾರಗಳು, ಚಳಿಗಾಲದ ಸಹಾಯ, ಮಕ್ಕಳಿಗೆ ಜಾಕೆಟ್ ಇತ್ಯಾದಿ ಅಭಿಯಾನದಲ್ಲಿ ವಿತರಿಸಲಿದ್ದು ಫೆಲಸ್ತೀನಿ ನಿರಾಶ್ರಿತರ ದುರಿತ ದೂರಮಾಡುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ ಎಂದು ಅಲಿಬಿನ್ ಅಲ್ ಹಸನ್ ಅಲ್ ಹಮಾದಿ ತಿಳಿಸಿದ್ದಾರೆ. ಕತರ್‌ನ ವಿದೇಶಿ ಸಹಾಯ- ಸಂತ್ರಸ್ತರಿಗಾಗಿರುವ ಕಾರ್ಯಗಳಲ್ಲಿ ಮುಖ್ಯ ಆದ್ಯತೆ ಫೆಲಸ್ತೀನಿಯರಿಗೆ ನೀಡಲಾಗುತ್ತದೆ ಮತ್ತು ಅಲ್ಲಿ ಸಂತ್ರಸ್ತರಿಗೆ ಸಹಾಯಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.