ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ಗಂಟಲೊಳಗೆ ಸ್ಫೋಟ: ದಾರುಣ ಸಾವು

0
207

ಲಕ್ನೊ,ಮೇ 17: ವಿಷ ಸೇವಿಸಿ ಆತ್ಮಹ್ಯೆಗೆ ಯತ್ನಿಸಿದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿಯೇ ಗಂಟಲೊಳಗೆ ಸ್ಫೋಟ ಸಂಭವಿಸಿ ದಾರುಣವಾಗಿ ಮೃತಪಟ್ಟ ಘಟನೆ ಅಲಿಗಡದ ಜೆಎನ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದು ವಿಷಾಂಶ ಹೊರಕ್ಕೆ ತರಲು ವೈದ್ಯರು ಯತ್ತಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ.

ವೈದ್ಯರು ಗಂಟಲೊಳಗಿನಿಂದ ವಿಷವನ್ನು ಹೊರತೆಗೆಯಲು ಪೈಪ್ ಹಾಕುತ್ತಿದ್ದರು. ಬಹುಶಃ ಯುವತಿಯು ಆತ್ಮಹತ್ಯೆ ಮಾಡಿಕೊಳ್ಳಲು ಸಲ್ಫೂರಿಕ್ ಆಸಿಡ್ ಸೇವಿಸಿರುವುದು ಸ್ಫೋಟಕ್ಕೆ ಕಾರಣವಾಗಬಹುದು. ಸಾಕ್ಸನ್ ಪೈಪ್ ಮೂಲಕ ಆಕ್ಸಿಜನ್ ಒಳಗೆ ಹೋದಾಗ ಪರಸ್ಪರ ಸಂಪರ್ಕವಾಗಿ ಸ್ಫೋಟವಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಸ್ಫೋಟದ ಸರಿಯಾದ ಕಾರಣ ಅರಿಯಲು ಸಮಗ್ರ ತನಿಖೆ ನಡೆಯುವ ಅಗತ್ಯವಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.