ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ ಪತ್ರ ಬರೆದಿಟ್ಟು ಆತ್ಮಹತ್ಯೆ

0
425

ಸನ್ಮಾರ್ಗ ವಾರ್ತೆ

ಬುಲಂದ್ ಶಹರ್,ನ.17: ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹತ್ತೊಂಬತ್ತು ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನನ್ನು ಅತ್ಯಾಚಾರಗೈದ ಮೂವರ ಕುರಿತು ಯುವತಿ ಆತ್ಮಹತ್ಯೆಯ ವೇಳೆ ಪತ್ರ ಬರೆದಿಟ್ಟಿದ್ದು, ಅನುಪ್‍ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಮರುದ್ದೀನ್, ಅವ್ರಾನ್, ಮುವೀನ್ ಎಂಬ ಆರೋಪಿಗಳು ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಆರೋಪವನ್ನು ಸೇರಿಸಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಾಲಿ ಅಕ್ಟೋಬರ್ ಮೂರರಂದು ಕಮರುದ್ದೀನ್ ವಿರುದ್ಧ ಅಪಹರಣ, ಅಪಮಾನಿಸಿದ ಆರೋಪವನ್ನು ಹೊರಿಸಿ ದೂರು ನೀಡಿದ್ದಳು. ನಂತರ ಅಂತಹದೊಂದು ಘಟನೆ ನಡೆದಿಲ್ಲ ತಾನು ಕುಟುಂಬದ ಒತ್ತಡಕ್ಕೆ ಮಣಿದು ಕೇಸು ಕೊಟ್ಟಿದ್ದೇನೆ ಎಂದು ಯುವತಿ ಹೇಳಿರುವುದಾಗಿ ಸೀನಿಯರ್ ಪೊಲೀಸ್ ಸುಪರಿಡೆಂಟ್ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದರು.

ನಂತರ ಅಕ್ಟೋಬರ್ 24ರಂದು ಯುವತಿ ಅದೇ ವ್ಯಕ್ತಿಯ ವಿರುದ್ಧ ಇನ್ನೊಂದು ದೂರು ನೀಡಿದ್ದು ಕಮರುದ್ದೀನ್, ಮಾವ ಮುವೀನ್, ಅವ್ರಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 16ರಂದು ಬೆಳಗ್ಗಿನ ಜಾವ ನಾಲ್ಕು ಗಂಟೆ ಕಮರುದ್ದೀನ್ ಕರೆ ಮಾಡಿದ್ದ. ಆತನನ್ನು ಭೇಟಿಯಾಗಲು ಯುವತಿ ಹೋದಾಗ ಮೂವರು ಸೇರಿ ಅಲಿಗಢದಲ್ಲಿ ಕರೆತಂದು ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ ಎಂದು ಎಸ್‍ಎಸ್‍ಪಿ ತಿಳಿಸಿದರು.

ಆದರೆ, ತನಿಖೆಯಲ್ಲಿ ಆರೋಪಿಗಳ ಮೊಬೈಲ್ ಟವರ್ ಲೋಕೇಶನ್ ವ್ಯಾಪ್ತಿಯಲ್ಲಿ ಯಾವುದೇ ಕರೆಗಳಿರುವುದು ಕಂಡು ಬಂದಿರಲಿಲ್ಲ. ದೂರಿನಲ್ಲಿ ತಿಳಿಸಿದ ಸಮಯ ಕಮರುದ್ದೀನ್ ಹರಿಯಾಣದ ಫರೀದಾಬಾದಿನಲ್ಲಿದ್ದ. ಯುವತಿಯ ಮೊಬೈಲ್‍ಗೆ ಆತ ಕರೆ ಮಾಡಿರಲಿಲ್ಲ. ಅವ್ರಾರ್ ತನ್ನ ಮನೆಯಲ್ಲಿದ್ದ. ಮುವೀನ್ ತನ್ನ ಊರಾದ ಅಲಿಗಢದಲ್ಲಿದ್ದ ಎಂದು ಪೊಲೀಸರು ತಿಳಿಸಿದರು.

ಪ್ರಾಥಮಿಕವಾಗಿ ಆರೋಪಿಗಳ ವಿರುದ್ಧ ಸಾಕ್ಷ್ಯಗಳಿಲ್ಲದಿದ್ದರೂ ಸರಿಯಾದ ರೀತಿಯಲ್ಲಿ ತನಿಖೆ ಮಾಡಿಲ್ಲ ಎನ್ನುವ ಕಾರಣದಿಂದ ತನಿಖೆ ನಡೆಸಿದ ಅಧಿಕಾರಿಗಳನ್ನು ಅಮಾನತು ಗೊಳಿಸಲಾಗಿದೆ.