ಉತ್ತರ ಪ್ರದೇಶ: 50 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ

0
336

ಸನ್ಮಾರ್ಗ ವಾರ್ತೆ

ಲಕ್ನೊ,ಜ.6: ಉತ್ತರ ಪ್ರದೇಶದಲ್ಲಿ 50 ವರ್ಷದ ಮಹಿಳೆಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ ದುಷ್ಕರ್ಮಿಗಳು ಕೊಲೆಮಾಡಿದ್ದು ಮಹಿಳೆ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಬದಾಯೂನಿನಲ್ಲಿ ಘಟನೆ ನಡೆದಿದೆ. ಮಹಿಳೆಯ ಗುಪ್ತಾಂಗಗಳಿಗೆ ಗಾಯಗಳಾಗಿದ್ದು ಕಾಲುಗಳು ಮುರಿದು ಹೋಗಿವೆ ಎಂದು ಪೋಸ್ಟ್ ಮಾರ್ಟಂ ವರದಿ ತಿಳಿಸಿದೆ.

ಜನವರಿ ಮೂರರಂದು ಮಹಿಳೆ ದೇವಸ್ಥಾನಕ್ಕೆ ಹೋದವರು ಮರಳಿ ಬಂದಿರಲಿಲ್ಲ. ನಂತರ ದೇವಸ್ಥಾನದ ಪುರೋಹಿತ ಮತ್ತು ಇಬ್ಬರ ಸೇರಿ ಮಹಿಳೆಯ ಮೃತದೇಹವನ್ನು ಮನೆಗೆ ತಂದಿದ್ದಾರೆ ಎಂದು ಮಹಿಳೆಯ ಪುತ್ರ ತಿಳಿಸಿದ್ದಾರೆ. ಏನಾಯಿತು ಎಂದು ಕೇಳುತ್ತಿದ್ದಂತೆ ಅವರು ಸ್ಥಳಬಿಟ್ಟು ಹೊರಟು ಹೋದರು ಎಂದು ಮಹಿಳೆಯ ಪುತ್ರ ತಿಳಿಸಿದ್ದಾರೆ.

ಮಹಿಳೆ ಬಾವಿಗೆ ಬಿದ್ದರು. ಬೊಬ್ಬೆ ಕೇಳಿ ಇಬ್ಬರು ಸೇರಿ ರಕ್ಷಿಸಲು ಯತ್ನಿಸಿದೆವು ಎಂದು ಪುರೋಹಿತ ಹೇಳಿದ್ದಾನೆ. ಬೇರೆ ಸಂಬಂಧಿಕರು ಮಹಿಳೆಯ ಜೊತೆ ಇಲ್ಲದ್ದರಿಂದ ಮೃತದೇಹವನ್ನು ಮನೆಗೆ ತಲುಪಿಸಿದೆವು ಎಂದಿದ್ದಾನೆ. ಇದೇ ವೇಳೆ ಮೃತ ಮಹಿಳೆಯ ಕುಟುಂಬ ಪುರೋಹಿತನ ವಿರುದ್ಧ ಆರೋಪ ಹೊರಿಸಿದ್ದು ಪೊಲೀಸರು ದೂರು ದಾಖಲಿಸಲು ತಡಮಾಡಿದರೆಂದು ಕುಟುಂಬ ತಿಳಿಸಿದೆ.

ಪೋಸ್ಟ್‌ಮಾರ್ಟಂ ವರದಿಯಲ್ಲಿ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದು ದೃಢಪಟ್ಟಿದ್ದು ಗುಪ್ತಾಂಗಕ್ಕೆ ಗಾಯಗಳಾಗಿದ್ದುಪ ಮತ್ತು ಎರಡು ಕಾಲುಗಳು ಮುರಿದಿರುವುದು ಬಹಿರಂಗವಾಗಿದೆ. ಘಟನೆಯಲ್ಲಿ ಕೊಲೆ, ಅತ್ಯಾಚಾರ ಆರೋಪದಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಲೋಪವೆಸಗಿದ ಎಸ್‍ಎಚ್‍ಒವನ್ನು ಅಮಾನತುಗೊಳಿಸಲಾಗಿದೆ.