ಕ್ಯಾನ್ಸರ್ ಇಲ್ಲದ ಗೃಹಿಣಿಗೆ ಕಿಮೋತೆರಪಿ ಮಾಡಿದ ವೈದ್ಯರು; ಮಾನವ ಹಕ್ಕು ಆಯೋಗದಿಂದ ದೂರು

0
618

ತಿರುವನಂತಪುರಂ,ಮೇ 3: ಕ್ಯಾನ್ಸರ್ ರೋಗವೇ ಇಲ್ಲದ ಗೃಹಣಿಯೊಬ್ಬರಿಗೆ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಿಮೋತೆರಪಿ ಮಾಡಲಾಗಿದೆ. ಈ ಘಟನೆಯ ಕುರಿತು ಮಾನವ ಹಕ್ಕು ಅಧ್ಯಕ್ಷ ಜಸ್ಟಿಸ್ ಆಂಟನಿ ಡೊಮನಿಕ್ ಕೇಸು ದಾಖಲಿಸಿಕೊಂಡಿದ್ದು, ಮೂರು ವಾರದೊಳಗೆ ತನಿಖೆ ನಡೆಸಿ ವರದಿ ಒಪ್ಪಿಸಬೇಕೆಂದು ವೈದ್ಯಕೀಯ ಶಿಕ್ಷಣ ನಿರ್ದೇಶಕರು ಆದೇಶಿಸಿದ್ದಾರೆ.

ಆಲಪ್ಪುಝ ಕುಡಶ್ಶನಾಡ್ ಎಂಬಲ್ಲಿನ ಪೀತಾಂಬರನ್‍ರ ಪುತ್ರಿ ವಿ. ರಜನಿ(38)ರಿಗೆ ಕ್ಯಾನ್ಸರ್ ಇದೆ ಎಂದು ಕಿಮೊತೆರಪಿ ನಡೆಸಲಾಗಿತ್ತು. ಸರಕಾರಿ ಲ್ಯಾಬ್‍ನಿಂದ ವರದಿ ತಡವಾಗುತ್ತದೆ ಎಂದು ಕೋಟ್ಟಯಂ ಮೆಡಿಕಲ್ ಕಾಲೇಜಿನ ಅಂಕಾಲಜಿ ವಿಭಾಗದ ವೈದ್ಯರು ಖಾಸಗಿ ಲ್ಯಾಬ್‍ನ ವರದಿಯನ್ನು ನಂಬಿ ಚಿಕಿತ್ಸೆ ನಡೆಸಿದ್ದಾರೆ. ಇದು ಎಡವಟ್ಟಿಗೆ ಕಾರಣವಾಗಿತ್ತು. ಎದೆಯಲ್ಲಿದ್ದ ಮೊರೆಯನ್ನು ಕ್ಯಾನ್ಸರ್ ಎಂದು ಕೋಟ್ಟಯಂ ಮೆಡಿಕಲ್ ಕಾಲೇಜು ಬಸ್ ನಿಲ್ದಾಣದ ಸಮೀಪದ ಡಯನೋವ ಲ್ಯಾಬ್ ಪರೀಕ್ಷಾ ಫಲಿತಾಂಶ ತಿಳಿಸಿತ್ತು. ನಂತರ ಗೃಹಿಣಿಗೆ ತುರ್ತಾಗಿ ಕಿಮೊತೆರಪಿ ನಡೆಸಲಾಯಿತು. ಸರಕಾರಿ ಲ್ಯಾಬ್ ಆದ ಕೋಟ್ಟಯಂ ಮೆಡಿಕಲ್ ಕಾಲೇಜು ಲ್ಯಾಬ್ ಮತ್ತು ತಿರುವನಂತಪುರಂ ಆರ್‍ಸಿಸಿಯಲ್ಲಿ ಗೃಹಿಣಿಗೆ ಕ್ಯಾನ್ಸರ್ ಇಲ್ಲ ಎಂದು ತಿಳಿದು ಬಂದಿತ್ತು.

ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರಿಗೆ ಕಿಮೋತೆರಪಿ ಮಾಡಿದ ಘಟನೆಯಲ್ಲಿ ರಾಜ್ಯ ಮಾನವಹಕ್ಕು ಆಯೋಗ ಅಧ್ಯಕ್ಷ ಜಸ್ಟಿಸ್ ಆಂಟನಿ ಡೊಮನಿಕ್ ಕೇಸು ದಾಖಲಿಸಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶಕರು ಘಟನೆಯ ಕುರಿತು ತುರ್ತಾಗಿ ತನಿಖೆ ನಡೆಸಿ ಮೂರು ವಾರದೊಳಗೆ ವರದಿ ಸಲ್ಲಿಸಬೇಕೆಂದು ಆಯೋಗ ಆದೇಶ ಹೊರಡಿಸಿದೆ.