ನೆರೆಹಾವಳಿ ನೋಡಲು ಬಂದು ಸೆಲ್ಫಿ ತೆಗೆಯುತ್ತಿದ್ದ ವೇಳೆ ತಾಯಿ,ಮಗಳು ನದಿಗೆ ಬಿದ್ದು ಮೃತ್ಯು

0
238

ಸನ್ಮಾರ್ಗ ವಾರ್ತೆ

ಭೋಪಾಲ್,ಆ.16: ನೆರೆ ಬಂದ ಪ್ರದೇಶದಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ನದಿಗೆ ಬಿದ್ದು ತಾಯಿ ಮಗಳು ಮೃತಪಟ್ಟಿದ್ದು, ಮೃತರನ್ನು ಬಿಂದು ಗುಪ್ತ(48), ಪುತ್ರಿ ಆರ್ಶರಿತಿ(22) ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ಮಂದಸಾರಿನಲ್ಲಿ ಘಟನೆ ನಡೆದಿದೆ.

ಮನೆ ಸಮೀಪದ ನದಿಯಲ್ಲಿ ನೆರೆ ನೀರು ಹರಿಯುತ್ತಿರುವುದನ್ನು ನೋಡಲು ಸರಕಾರಿ ಕಾಲೇಜಿನ ಪ್ರೊಫೆಸರ್ ಪತ್ನಿ ಮಕ್ಕಳೊಂದಿಗೆ ಬಂದಿದ್ದರು. ಕುಟುಂಬ ಜೊತೆಯಲ್ಲಿ ನಿಂತು ಸೆಲ್ಪಿ ತೆಗೆಯುವ ವೇಳೆ ಮಣ್ಣು ಕುಸಿದು ಅಮ್ಮ ಮಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇವರಿಬ್ಬರ ಮೃತದೇಹ ನಂತರ ಪತ್ತೆಯಾಯಿತೆಂದು ಮಂದಸಾರ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಹಿತೇಶ್ ಚೌಧರಿ ತಿಳಿಸಿದರು. ಇದಾದ ಒಂದು ಗಂಟೆಯ ನಂತರ ಮಂದಸಾರಿನ ಅಫ್ಝಲ್‍ ಫುಲ್ ಕಡೆಯಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ನೀರಿಗೆ ಬಿದ್ದು ಮೃತಪಟ್ಟಿದ್ದು, ಇದರೊಂದಿಗೆ ಮಧ್ಯಪ್ರದೇಶದಲ್ಲಿ ಮಳೆಯಿಂದಾಗಿ ಈವರೆಗೆ ಒಟ್ಟು 39 ಮಂದಿ ಮೃತಪಟ್ಟಿದ್ದಾರೆ.