ಕೊರೋನ ವ್ಯಾಕ್ಸಿನ್ ತೆಗೆದುಕೊಳ್ಳುವುದಿಲ್ಲ- ಬ್ರೆಝಿಲ್ ಅಧ್ಯಕ್ಷ

0
563

ಸನ್ಮಾರ್ಗ ವಾರ್ತೆ

ಸಾವೊ ಪಾವ್ಲೊ,ನ.28: ಕೊರೋನ ವ್ಯಾಕ್ಸಿನ್ ತೆಗೆದುಕೊಳ್ಳುವುದಿಲ್ಲ ಎಂದು ಬ್ರಝಿಲ್ ಅಧ್ಯಕ್ಷ ಜೆಯಿರ್ ಬೊಲ್ಸನರೊ ಹೇಳಿದ್ದಾರೆ. ಕೊರೋನ ವ್ಯಕ್ಸಿನ್ ತೆಗೆದುಕೊಳ್ಳಲಾರೆ ಎಂದು ಹೇಳಲು ಬಯಸುತ್ತೇನೆ. ವ್ಯಾಕ್ಸಿನ್ ಸ್ವೀಕರಿಸದಿರುವುದು ನನ್ನ ಹಕ್ಕು. ಹಲವು ಬಾರಿ ಕೊರೊನ ವ್ಯಾಕ್ಸಿನ್ ಪರೀಕ್ಷೆಯ ವಿರುದ್ಧ ಅವರು ಹರಿಹಾಯ್ದಿದ್ದರು.

ಬ್ರೆಝಿಲ್‌ನಲ್ಲಿ ಜಗತ್ತಿನ ಹೆಚ್ಚು ಕೊರೋನ ಸಾವುಗಳು ವರದಿಯಾಗಿದ್ದು, ಕಳೆದ ಜುಲೈನಲ್ಲಿ ಬೊಲ್ಸನರೊರಿಗೂ ಕೊರೋನ ದೃಢಪಟ್ಟಿತ್ತು. ಕೊರೋನ ತೀವ್ರವಾಗಿರುವ ಸಮಯದಲ್ಲಿಯೂ ವ್ಯಾಕ್ಸಿನ್ ಮಾಕ್ಸ್ ವಿರುದ್ಧ ನಿಲುವುಗಳೊಂದಿಗೆ ಅವರು ಮುಂದುವರಿದಿದ್ದಾರೆ. ಈ ಹಿಂದೆ ಒಮ್ಮೆ ಅವರು ಕೊರೋನ ವ್ಯಾಕ್ಸಿನ್ ನಾಯಿಗೆ ಕೊಡುವುದು ಆಗಿದೆ ಎಂದು ಟ್ವೀಟ್ ಮಾಡಿದ್ದರು.