ಯಮನ್: 50 ಲಕ್ಷ ಮಕ್ಕಳು ಕ್ಷಾಮಕ್ಕೆ ತುತ್ತು!

0
454

ಯೆಮನಿನಲ್ಲಿ 50 ಲಕ್ಷಕ್ಕಿಂತಲೂ ಅಧಿಕ ಮಕ್ಕಳು ಬರಗಾಲಕ್ಕೆ ತುತ್ತಾಗಿದ್ದು; ಆಹಾರ ಉತ್ಪನ್ನಗಳ ಹಾಗೂ ತೈಲಬೆಲೆಯ ಏರಿಕೆಯಿಂದಾಗಿ ಹಸಿವಿನಿಂದ ಸಾಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಲಂಡನ್ ಮೂಲದ ದತ್ತಿ ಸಂಸ್ಥೆಯೊಂದು ವರದಿ ಮಾಡಿದೆ.

ಹೂತಿಗಳು ಹೋದೆದಾಹ್ ನಗರದಲ್ಲಿ ಬಂಡಾಯವೆದ್ದಿದ್ದು ಗಡಿಪಾರು ಮಾಡಲಾದ ಅಧ್ಯಕ್ಷ ಅಬ್ದು-ರಬ್ಬುಲ್ ಮನ್ಸೂರ್ ಹಾದಿಗೆ ಸೇನೆಯು ನಿಷ್ಠೆಯನ್ನು ತೋರುತ್ತಿದೆ.

ಹೂತಿಗಳಿಗೆ ಶಸ್ತ್ರಾಸ್ತ್ರಗಳ ಪೂರೈಕೆಯ ಮುಖ್ಯ ಕೇಂದ್ರವಾಗಿ ಹೋದೆದಾಹ್ ನಗರವು ಕಂಡು ಬರುತ್ತಿದ್ದು, ಬಂದರು ಪ್ರದೇಶಗಳನ್ನು ಮರುಪಡೆದುಕೊಳ್ಳಲು ಸೌದಿ ಅರೇಬಿಯಾ ಮತ್ತು ಯುಎಇ ಬೃಹತ್ ಪ್ರಮಾಣದ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಬಂಡಾಯಗಾರರಿಗೆ ಇರಾನ್ ಶಸ್ತ್ರಾಸ್ತ್ರಗಳನ್ನೂ ಮಿಸೈಲ್‍ಗಳನ್ನೂ ಪೂರೈಸುತ್ತಿದೆ ಎಂದು ಈ ಬಣಗಳು ಆರೋಪಿಸಿವೆ.

ಯೆಮನ್‍ನಲ್ಲಿ ಈಗಾಗಲೇ `ಮಕ್ಕಳನ್ನು ರಕ್ಷಿಸಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಯೆಮನಿನ 80% ಜನತೆಗೆ ಆಹಾರ ಪೂರೈಕೆಯಾಗುತ್ತಿಲ್ಲ. ಇದಲ್ಲದೇ ಇಂಧನಗಳ ಹಾಗೂ ಆಹಾರ ಉತ್ಪನ್ನಗಳ ಬೆಲೆಯು ಗಗನಕ್ಕೇರುತ್ತಿದ್ದು ಜನಸಾಮಾನ್ಯರ ಕೈಗೆಟುಕುತ್ತಿಲ್ಲ ಎಂದು ಸುರಕ್ಷಾ ಕಾರ್ಯಾಚರಣೆಯ ಗುಂಪುಗಳು ತಿಳಿಸಿವೆ.

ಯುದ್ಧವು ಸಂಪೂರ್ಣವಾಗಿ ನವ ಪೀಳಿಗೆಯನ್ನು ಬಲಿ ಪಡೆಯುವ ಭೀತಿ ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಬಾಂಬುಗಳ ದಾಳಿ, ಹಸಿವು ಹಾಗೂ ಕಾಲರಾಗಳಂತಹ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ ಎಂದು ಮಕ್ಕಳನ್ನು ಸಂರಕ್ಷಿಸಿ ಅಭಿಯಾನದ ಮುಖ್ಯಸ್ಥರಾದ ಹೆಲ್ಲೆ ಟ್ರೋನಿಂಗ್ ಸ್ಮಿತ್ ತಿಳಿಸಿದ್ದಾರೆ.