ಯಮನ್‍ನಲ್ಲಿ ಒಂದೆಡೆ ಕೊರೋನ ಮತ್ತೊಂದೆಡೆ ಕಾಲರಾ ಭೀತಿ

0
123

ಸನ್ಮಾರ್ಗ ವಾರ್ತೆ

ಸನ್‍ಆ,ಜು.29: ಕೊರೋನ ಸೋಂಕಿನ ನಡುವೆ ಯಮನ್‍ನಲ್ಲಿ ಕಾಲರಾ ಭೀತಿಯೂ ಹರಡುತ್ತಿದೆ. ಈ ಹಿಂದೆ ಕಾಲರಾದಿಂದ ಇಲ್ಲಿ ಸಾವಿರ ಮಂದಿ ಮೃತಪಟ್ಟಿದ್ದರು. ಈ ನಡುವೆ ಕೊರೋನಾವೂ ದಾಳಿಯಿಟ್ಟಿತ್ತು.

ಆಂತರಿಕ ಯುದ್ಧದಿಂದ ತತ್ತರಿಸಿದ ಯಮನ್‍ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ತುರ್ತು ಸೌಲಭ್ಯ ಇಲ್ಲದ್ದು ಪರಿಸ್ಥಿತಿಯನ್ನು ವಿಕೋಪಕ್ಕೆ ತಂದು ನಿಲ್ಲಿಸಿದೆ. ಕೊರೋನ ಕೇಸುಗಳು ಮುಂದಿನ ವಾರದಿಂದ ಇನ್ನೂ ಜಾಸ್ತಿಯಾಗುವುದುದೆಂದು ಓಕ್ಸ್ಪೊಂ ಸಮಾಜ ಸೇವಾ ಸಂಘಟನೆ ಅಭಿಪ್ರಾಯ ವ್ಯಕ್ತಪಡಿಸಿದೆ. ಆಗಸ್ಟ್‌ನಲ್ಲಿ ಭಾರೀ ಮಳೆ, ಕಾಲರಾ ಬಿಕ್ಕಟ್ಟು ಹೆಚ್ಚಾಗಬಹುದು ಎಂದು ಅವರು ಹೇಳಿದರು.

ಈ ವರ್ಷ ಮೊದಲ ಮೂರು ತಿಂಗಳಲ್ಲಿ ಯಮನ್‍ನಲ್ಲಿ ಒಂದು ಲಕ್ಷ ಮಂದಿಗೆ ಕಾಲರಾ ಬಾಧಿಸಿತ್ತು. ಆದರೆ, ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್ ವ್ಯಾಪಿಸುವುದರೊಂದಿಗೆ ಕಾಲರಾ ಶೇ.50ರಷ್ಟು ಕಡಿಮೆಯಾಗಿತ್ತು. ಈಗ ಪುನಃ ಅದು ಮರಳಿ ಬರುವ ಸಾಧ್ಯತೆಯಿದೆ ಎಂದು ಓಕ್ಸ್ಫೊಂ ಹೇಳಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.