ಪೋಷಕರ ಬಿಡುಗಡೆಗಾಗಿ ಮಗಳು ಔಲಾ ಕರ್ಜಾಯಿಯ ಈ-ಮೇಲ್ ಅಭಿಯಾನ

0
1025

ಈಜಿಪ್ಟ್ ಮೂಲದ ಪ್ರಸಿದ್ಧ ವಿದ್ವಾಂಸ ಯೂಸುಫ್ ಅಲ್-ಕರ್ಝವಿ  ಅವರ ಮಗಳಾಗಿರುವ ಔಲಾರನ್ನು  2017 ಜೂನ್ ನಲ್ಲಿ  ಪತಿ ಉಸಾಮ ಖಲಾಫ್ ಜೊತೆಗೆ ಬಂಧಿಸಿಡಲಾಗಿದ್ದು, ಅವರು ಬಿಡುಗಡೆಯ ಭರವಸೆಯನ್ನು ಕಳೆದುಕೊಂಡಿದ್ದಾರೆ ಎಂದು ಅಮೆರಿಕದಲ್ಲಿರುವ ಅವರ ಮಗಳು ಹಯ ತಿಳಿಸಿದ್ದಾರೆ.
ಆದ್ದರಿಂದ ತನ್ನ  ತಾಯಿ ಮತ್ತು ತಂದೆ ಬಿಡುಗಡೆಗಾಗಿ ಮಧ್ಯಪ್ರವೇಶಿಸುವಂತೆ  ಅಮೇರಿಕನ್ ಕಾಂಗ್ರೆಸ್ ಸದಸ್ಯರನ್ನು ಒತ್ತಾಯಿಸಲು ಇಮೇಲ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಮುಸ್ಲಿಂ ಬ್ರದರ್ಹುಡ್ ಗೆ  ಬೆಂಬಲ ನೀಡಿದ  ಆರೋಪವನ್ನು  ಈ ದಂಪತಿಗಳು ಎದುರಿಸುತ್ತಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಸಾಕ್ಷಿ ಅಥವಾ ಅಧಿಕೃತ  ಆಪಾದನೆಗಳಿಲ್ಲ , ವಿಶ್ವಸಂಸ್ಥೆಯ  ಮಾನವ ಹಕ್ಕುಗಳ ಮಂಡಳಿ ಸೇರಿದಂತೆ ಪ್ರಮುಖ ಹಕ್ಕುಗಳ ಸಂಘಟನೆಗಳು ಕರ್ಝವಿ ಮತ್ತು ಖಲಾಫ್ ಬಿಡುಗಡೆಗೆ ಕರೆ ನೀಡಿದೆ. ಅಮೆರಿಕದಲ್ಲಿ ದಂಪತಿಯ ಬೆಂಬಲಿಗರು ಮತ್ತು ಜನಪ್ರತಿನಿಧಿಗಳು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಡನೆ ಬೇಡಿಕೆಯಿರಿಸಿದ್ದಾರೆ.
“ಪರಿಸ್ಥಿತಿ ಘೋರವಾಗಿದೆ ಮತ್ತು ನೀವು ಈಗ ಕಾರ್ಯನಿರ್ವಹಿಸ ಬೇಕಾಗಿದೆ. ದಯವಿಟ್ಟು ಔಲಾ ಮತ್ತು ಉಸಾಮರು ಬಿಡುಗಡೆಗೊಂಡು  ಅವರು ಮಕ್ಕಳೊಂದಿಗೆಸೇರಲು  ಸಾಧ್ಯವಾಗುವ ಯಾವುದೇ ಕ್ರಮಗಳನ್ನು  ತೆಗೆದುಕೊಳ್ಳಿ. ದಯವಿಟ್ಟು ಈಜಿಪ್ಟ್ ರಾಯಭಾರಿಯೊಡನೆ ಅವರ ಬಿಡುಗಡೆ ಮತ್ತು ಸುಧಾರಿತ ಪರಿಸ್ಥಿತಿಗಳಿಗಾಗಿ ವಿನಂತಿಸಿ,” ಎಂದು ಬರೆದಿರುವ ಈ ಮೇಲನ್ನು ಅಮೆರಿಕಾದ  ವಿದೇಶ ಸಂಬಂಧಗಳ ಸಮಿತಿಯ ಸೆನೆಟರ್ ಸೇರಿದಂತೆ ಕಾಂಗ್ರೆಸ್ ನ ವಿವಿಧ ಸದಸ್ಯರಿಗೆ ಕಳುಹಿಸಲಾಗಿದೆ.
‘ಅವರಿಗೆ ಹತೋಟಿ ಇದೆ’
ಟ್ರಂಪ್  ಆಡಳಿತವು ಕೈರೋದ  ಮಾನವ ಹಕ್ಕುಗಳ ಮೇಲೆ  ಒತ್ತಡ ಹಾಕುತ್ತಿಲ್ಲ ಎಂದು ಹಯ  ಹೇಳಿದ್ದಾರೆ.
” ಆಡಳಿತವು ನಿಜವಾಗಿಯೂ ಇದನ್ನು ಸಾಧಿಸಲು ಬಯಸಿದರೆ, ಹಾಗೆ ಮಾಡಲು ಅವರು ಅಧಿಕಾರ ಹೊಂದಿರುತ್ತಾರೆ ಎಂದು ನಾನು ಭಾವಿಸುತ್ತೇನೆ”  ಯೇವದವರು MEE ಪತ್ರಿಕೆಗೆ ತಿಳಿಸಿದ್ದಾಗಿ ಪತ್ರಿಕೆ ಪ್ರಕಟಿಸಿದೆ. ಅವರು ಹತೋಟಿ ಹೊಂದಿದ್ದಾರೆ, ಆದರೆ ಅವರು ಅದನ್ನು ಮಾಡಬೇಕಾದ ರೀತಿಯಲ್ಲಿ ಬಳಸುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಅವರನ್ನು  ಕತಾರ್ ವಿರುದ್ಧದ ತನ್ನ ನೀತಿಗಳ ಭಾಗವಾಗಿ ಈಜಿಪ್ಟ್ ಬಂಧಿಸಿದೆ  ಎಂದು ಕರ್ಝವಿ ಮತ್ತು ಖಲಾಫ್ ಕುಟುಂಬದವರು ಶಂಕಿಸಿದ್ದಾರೆ. ಕತಾರ್ ಗೆ  ದಿಗ್ಬಂದನ ವಿಧಿಸುವ ಒಂದು ತಿಂಗಳಿಗೂ ಮೊದಲು,ಹಯರ ಪೋಷಕರನ್ನು ಬಂಧಿಸಲಾಗಿದೆ.
ಮುಸ್ಲಿಂ ಬ್ರದರ್ಹುಡ್ ಗೆ  ದೊಹಾದ ನೀಡುತ್ತಿರುವ ಬೆಂಬಲವು  ರಾಜತಾಂತ್ರಿಕ ಬಿಕ್ಕಟ್ಟಿನ  ಪ್ರಮುಖ ಕಾರಣ. 92 ವರ್ಷದ ಇಸ್ಲಾಮಿಕ್ ವಿದ್ವಾಂಸನನ್ನು ಇಸ್ಲಾಮಿಸ್ಟ್  ಗುಂಪಿನ ಅಧ್ಯಕ್ಷರಾಗಿ  ಗುರುತಿಸಲಾಗಿದೆ, ಆದರೆ ಅವರಿಗೆ ಬ್ರದರ್ಹುಡ್ ನೊಂದಿಗೆ  ಯಾವುದೇ ಅಧಿಕೃತ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ.

ಆಂಗ್ಲ ಬರಹ:ಅಲಿ ಹರ್ಬ್
ಕನ್ನಡಕ್ಕೆ: ಆಯಿಷತುಲ್ ಅಫೀಫ
ಮೂಲ: Middle East Eye