ಜಪಾನಿನ ನೂತನ ಪ್ರಧಾನಿಯಾಗಿ ಯೋಶಿಹಿಡೆ ಸುಗಾ ಆಯ್ಕೆ

0
309

ಸನ್ಮಾರ್ಗ ವಾರ್ತೆ

ಟೋಕಿಯೊ,ಸೆ.16: ಪ್ರಧಾನ ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಮಾಜಿ ಪ್ರಧಾನಿ ಶಿಂಟೊ ಅಬೆಯ ನಂಬಿಕಸ್ಥರಾಗಿರುವ ಯೋಶಿಹಿಡೆ ಸುಗಾ ಜಪಾನಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು.

ಯೋಶಿಹಿಡೆ ಸುಗಾರನ್ನು ಪಾರ್ಟಿಯ ಮುಖ್ಯಸ್ಥನನ್ನಾಗಿ ಆಡಳಿತ ಪಕ್ಷವಾದ ಲಿಬರಲ್ ಡೆಮಕ್ರಾಟಿಕ್ ಪಾರ್ಟಿ(ಎಲ್‍ಡಿಪಿ) ಸೋಮವಾರ ಆಯ್ಕೆ ಮಾಡಿತ್ತು.

ಪಾರ್ಟಿಯು ಎರಡನೇ ಮೂರು ಅಂಶ ಬಹುಮತವನ್ನು ಹೊಂದಿದೆ. ಆದುದರಿಂದ ಬುಧವಾರ ನಡೆದ ಮತದಾನದಲ್ಲಿ ಯೋಶಿಹಿಡೆರವರ ಜಯವ ನಿಶ್ಚಿತವಾಗಿತ್ತು. ಆರೋಗ್ಯ ಕಾರಣಗಳಿಂದಾಗಿ ತನ್ನ ಕಾರ್ಯಾವಧಿ ಮುಗಿಯು ಮೊದಲೇ ಶಿಂಟೊ ಅಬೆ ರಾಜೀನಾಮೆ ನೀಡಿದ್ದರು.

71 ವರ್ಷದ ಯೋಶಿಹಿಡೆ ಜಪಾನಿನ ಸ್ಟ್ರಾಬರಿ ರೈತರೊಬ್ಬರ ಪುತ್ರನಾಗಿದ್ದಾರೆ. ಎಂಟು ವರ್ಷ ಜಪಾನಿನ ಪ್ರಧಾನಿಯಾಗಿದ್ದ ಶಿಂಟೊ ಅಬೆ ಯೋಶಿಹಿಡೆರಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಅವರು ಉತ್ತಮವಾಗಿ ಕೆಲಸ ಮಾಡಿದ್ದರು. ಯೋಶಿಹಿಡೆರ ನೇತೃತ್ವದಲ್ಲಿ ಜಪಾನಿಗೆ ಕೊರೋನ ಪ್ರತಿರೋಧದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ಶಿಂಟೊ ಅಬೆ ಹೇಳಿದ್ದಾರೆ.

ಕೊರೋನ ಸಮಸ್ಯೆಯ ಜೊತೆ ಜೊತೆಗೆ ಅರ್ಥ ವ್ಯವಸ್ಥೆಯ ಪುನಶ್ಚೇತನಗೊಳಿಸುವ ಹೊಣೆ ಯೋಶಿಹಿಡೆರ ಹೆಗಲ ಮೇಲೇರಿದೆ. ಶಿಂಟೊ ಅಬೆ ಜಾರಿಗೆ ತಂದ ಆರ್ಥಿಕ ನೀತಿಯು ಪ್ರಾಥಮಿಕ ಹಂತದಲ್ಲಿ ಯಶಸ್ವಿಯಾಗಿದ್ದರೂ ನಂತದ ಮಾಂದ್ಯಕ್ಕೆ ಹೊರಳಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.