ಆನ್‌ಲೈನ್ ಜೂಜಾಟ: ಲಕ್ಷಾಂತರ ರೂಪಾಯಿ ಕಳಕೊಂಡ ಯುವಕನಿಂದ ಆತ್ಮಹತ್ಯೆ

0
204

ಸನ್ಮಾರ್ಗ ವಾರ್ತೆ

ಚೆನ್ನೈ,ಅ.20: ಆನ್‍ಲೈನ್ ಜೂಜಿನಲ್ಲಿ ಲಕ್ಷಾಂತರ ರೂಪಾಯಿ ಕಳಕೊಂಡ ಯುವಕ ಪತ್ನಿಗೆ ಧ್ವನಿ ಸಂದೇಶವನ್ನು ಕಳಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುದುಚೇರಿ ಕೊರ್‍ಕಾಡ್ ವಿಜಯ ಕುಮಾರ್(36) ಅನ್ಯಾಯವಾಗಿ ಮೃತಪಟ್ಟ ಯುವಕನಾಗಿದ್ದು ಆತ ಧ್ವನಿ ಸಂದೇಶದಲ್ಲಿ ತೀರಿಸಲಾಗದಷ್ಟು ಸಾಲಗಳಿವೆ ಎಂದು ತಿಳಿಸಿದ್ದಾನೆ.

ಆನ್‍ಲೈನ್ ಗೇಮ್‍ಗಳಿಗೆ ಯಾರೂ ಆಡಿಕ್ಟ್ ಆಗಬೇಡಿ ಎಂದೂ ಆತ ಸಂದೇಶ ನೀಡಿದ್ದಾನೆ. 30 ಲಕ್ಷಕ್ಕೂ ಹೆಚ್ಚು ಹಣ ಸಾಲ ಆತನಿಗೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯ ಕುಮಾರನ ಪತ್ನಿ ಮಧುಮಿತಾ ನೀಡಿದ ಮಾಹಿತಿಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ಕೊರ್ಕಾಡ್ ನತ್ತಮೇಡ್‍ ಎಂಬಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಮೀಪದಲ್ಲಿ ವಿಜಯಕುಮಾರ್‌ನ ಬೈಕ್ ಕೂಡ ಇತ್ತು. ಆತನಿಗೆ ಇಬ್ಬರು ಮಕ್ಕಳಿದ್ದಾರೆ.