ಜನಾಂಗೀಯ ವಿರೋಧಿ ಹೇಳಿಕೆ: ಕ್ಷಮೆಯಾಚಿಸಿದ ಝಾಕಿರ್ ನಾಯ್ಕ್

0
408

ಸನ್ಮಾರ್ಗ ವಾರ್ತೆ

ಕೌಲಾಲಂಪುರ,ಆ.21: ಮಲೇಶ್ಯದ ಅಲ್ಪಸಂಖ್ಯಾತ ಹಿಂದೂ ಧರ್ಮದವರ ಕುರಿತು ನೀಡಿದ ಜನಾಂಗೀಯವಾದಿ ಹೇಳಿಕೆಗಳಿಗೆ ಝಾಕಿರ್ ನಾಯ್ಕ್ ಕ್ಷಮೆ ಯಾಚಿಸಿದ್ದಾರೆ. ಪೊಲೀಸರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬೆನ್ನಿಗೆ ತನ್ನ ಹೇಳಿಕೆಗೆ ಅವರು ಖೇದ ವ್ಯಕ್ತಪಡಿಸಿದರು. ಯಾವುದೇ ವ್ಯಕ್ತಿ, ಸಮುದಾಯಕ್ಕೆ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಅದು ಇಸ್ಲಾಮಿನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ವಿವಾದಿತ ಹೇಳಿಕೆಯ ನಂತರ ಮಲೇಶ್ಯದಲ್ಲಿ ಸಾರ್ವಜನಿಕವಾಗಿ ಮಾತಾಡದಂತೆ ಅವರಿಗೆ ನಿಷೇಧ ಹೇರಲಾಗಿತ್ತು. ಅವರ ವಿರುದ್ಧ ನಿಷೇಧ ಮುಂದುವರಿಯಲಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ವಿದ್ವೇಷ ಭಾಷಣ, ಆರ್ಥಿಕ ಅಕ್ರಮ ಆರೋಪ ಹೊರಿಸಿ ಕೇಸು ದಾಖಲಿಸಿದ ಬಳಿಕ ಭಾರತದಿಂದ ಝಾಕಿರ್ ನಾಯ್ಕ್ ಮಲೇಶ್ಯದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಮಲೇಶ್ಯದ ಪರಂಪರಾಗತ ಅಲ್ಪಸಂಖ್ಯಾತ ವಿಭಾಗವನ್ನು ಅಪಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಅವರನ್ನು ವಿಚಾರಣೆಗೆ ಗುರಿಪಡಿಸಿದ್ದರು. ಸರಕಾರದ ವಿರುದ್ಧ ಮಲೇಶ್ಯದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ನಂತರ ಮಲೇಶ್ಯದ ಅಧ್ಯಕ್ಷ ಮುಹಾತೀರ್ ಮುಹಮ್ಮದ ಮಧ್ಯಪ್ರವೇಶಿಸಿದ್ದರು.