ಇಂದಿನಿಂದ ಲೇ ಪಂಗಾ ಹವಾ,,,, ಪ್ರೊ ಕಬಡ್ಡಿ 5ನೇ ಆವೃತ್ತಿ

0
2254

ನ್ಯೂಸ್ ಕನ್ನಡ ವರದಿ-(28.07.17): ಹೈದರಾಬಾದ್: ಲೇ ಪಂಗಾ ಲೇ ಪಂಗಾ… ಪ್ರೊ ಕಬಡ್ಡಿ ಲೀಗ್ ಐದನೇ ಆವೃತ್ತಿಯು ಇಂದು ಹೈದರಬಾದ್‍ನಲ್ಲಿ ಮೊದಲ ಪಂದ್ಯ ಆಡುವ ಮೂಲಕ ಚಾಲನೆ ಸಿಗಲಿದೆ.

ಪುರುಷರ ಮತ್ತು ಮಹಿಳೆಯ ಚಾಂಪಿಯನ್ ಟ್ರೋಫಿ ಇತ್ತೀಚೆಗೆ ಮುಗಿದಿದೆ. ಕ್ರೀಡಾಭಿಮಾನಿಗಳಿಗೆ ಮತ್ತಷ್ಟು ಕ್ರೀಡಾ ರಸದೌತನ ನೀಡಲು ಪ್ರೋ ಕಬಡ್ಡಿಯ 5ನೇ ಆವೃತ್ತಿ ಆರಂಭವಾಗಲಿದೆ. ಇದಕ್ಕಾಗಿ ಭಾರೀ ಸಿದ್ಧತೆಗಳು ನಡೆದಿದೆ.

ಈ ಕಬ್ಬಡಿ ಪಂದ್ಯಾಟದಲ್ಲಿ ಹೊಸ ತಂಡಗಳನ್ನು ಸೇರಿಸಲಾಗಿದೆ, ಈ ಬಾರಿ ಲೀಗ್‍ನಲ್ಲಿ ಒಟ್ಟು 12 ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ. ಪ್ರೊ ಕಬಡ್ಡಿ ಪಂದ್ಯಾಟವು ಜುಲೈ 28ರಿಂದ ಆಗಸ್ಟ್ 3ರವರೆಗೆ ನಡೆಯಲಿದೆ. ಇದರಲ್ಲಿ ಹೈದರಾಬಾದ್ ಚರಣದ ಪಂದ್ಯಗಳು ಮಾತ್ರ.

ಕಬಡ್ಡಿ ತಂಡಗಳು:

ಗುಂಪು ಎ: ದಬಂಗ್ ಡೆಲ್ಲಿ, ಗುಜರಾತ್‍ಫಾರ್ಚೂನ್‍ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪುಣೇರಿ ಪಲ್ಟನ್, ಯು ಮುಂಬಾ,

ಗುಂಪು ಬಿ: ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ಪಟ್ನಾ ಪೈರೇಟ್ಸ್, ತಮಿಳ್ ತಲೈವಾಸ್, ತೆಲುಗು ಟೈಟನ್ಸ್, ಯು.ಪಿ.ಯೋಧಾ.