ರಮಾನಾಥ ರೈಯನ್ನು ಹೋಮ್ ಮಿನಿಸ್ಟರ್ ಮಾಡ್ತೀವಂತ ನಾವು ಹೇಳಿದ್ದೀವಾ?: ಸಿಎಂ ಸಿದ್ದರಾಮಯ್ಯ

0
2395

ನ್ಯೂಸ್ ಕನ್ನಡ ವರದಿ-(25.07.17): ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಗೃಹಸಚಿವ ಸ್ಥಾನ ನೀಡುವ ಗೊಂದಲ ಹಾಗೂ ಕೆಲವೊಂದು ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತೆರೆಎಳೆದಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆದಿದಿದೆ. ಆದರೆ ಸಚಿವ ಸಂಪುಟದಲ್ಲಿ ಇನ್ನೂ ಮೂರು ಖಾತೆಗಳು ಖಾಲಿ ಇವೆ. ಈ ಮೂವರು ಸಚಿವರ ನೇಮಕದ ಬಳಿಕ ಗೃಹ ಸಚಿವರನ್ನು ನೇಮಕ ಮಾಡುವ ಚಿಂತನೆ ನಡೆಸಲಾಗುವುದು.ಸಚಿವ ರಮಾನಾಥ ರೈ ಅವರನ್ನು ಗೃಹ ಸಚಿವರನ್ನಾಗಿ ಮಾಡುವುದು ಅಂತ ನಿಮಗೆ ಯಾರು ಹೇಳಿದ್ದು?. ಅವರನ್ನು ಗೃಹಸಚಿವರನ್ನಾಗಿ ಮಾಡ್ತೇವೆ ಎಂದು ನಾವು ಹೇಳಿದ್ವಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.