ಸ್ವಾತಂತ್ರ್ಯ ಚಳವಳಿ ಮತ್ತೆ ಆರಂಭಿಸಬೇಕೇ?

0
7730

ಸ್ವತಂತ್ರ ಭಾರತವು ತನ್ನ ಸ್ವಾತಂತ್ರ್ಯೋ ತ್ಸವದ ಎಪ್ಪತ್ತರ ಹೊಸ್ತಿಲಲ್ಲಿದೆ. ದೇಶದಲ್ಲಿ ಪ್ರಸಕ್ತ ಕಾಲದಲ್ಲಿ ನಡೆಯುತ್ತಿರುವ ಆಗು ಹೋಗುಗಳನ್ನು ಗಮನಿಸಿದಾಗ ದೇಶವು ಈ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತವಾಗಿ ಉಳಿದಿದೆಯೇ ಎಂದು ಆತ್ಮಾವಲೋಕನ ಮಾಡಬೇಕಾದ ಕಾಲ ಸಂಜಾತ ವಾಗಿದೆ. ಶಾಂತಿ, ಸಹನೆಯ ದ್ಯೋತಕವಾದ ಭಾರತದಲ್ಲಿ ಭೀತಿಯ ವಾತಾವರಣ ನಿರ್ಮಾಣ ವಾಗಿದೆ. ಅಧಿಕಾರಶಾಹಿಗಳ ಕಪಿಮುಷ್ಠಿಯು ದಿನೇ ದಿನೇ ಪ್ರಬಲವಾಗುತ್ತಿದೆ. ಸರ್ವಾಧಿಕಾರಿ ಧೋರಣೆಗಳೂ ದಿ ನೇ ದಿನೇ ವರ್ಧಿಸುತ್ತಿವೆ. ನಾವು ಯಾವ ಉಡುಪು ಧರಿಸಬೇಕು, ಯಾವ ಆಹಾರ ಸೇವಿಸಬೇಕು, ಹೇಗೆ ಜನರನ್ನು ಸಂಬೋಧಿಸಬೇಕು ಎಂಬುದರ ಕುರಿತು ಸ್ವತಂತ್ರ ವಾಗಿ ಆಲೋಚಿಸಲು ಆತಂಕಪಡಬೇಕಾದ ಅನಿ ವಾರ್ಯತೆ ಎದುರಾಗಿದೆ. ಸರಕಾರದ ವಿರುದ್ಧ ಇರುವವರನ್ನು ಸದ್ದಡಗಿಸಲು ತಂತ್ರ ಹೆಣೆಯಲಾಗು ತ್ತಿದೆ. ಅಧಿಕಾರವನ್ನು ಇನ್ನಷ್ಟು ಪ್ರಬಲಗೊಳಿಸುವ ನಿಟ್ಟಿನಲ್ಲಿ ಅಡ್ಡದಾರಿ ಹಿಡಿಯುತ್ತಿರುವುದು ಸರ್ವೇ ಸಮಾನ್ಯವಾಗಿದೆ. ಅಧಿಕಾರವನ್ನು ಯಾವ ರೀತಿ ಎಲ್ಲೆಲ್ಲಾ ದುರುಪಯೋಗಪಡಿಸಬಹುದೆಂಬುದಕ್ಕೆ ಸದ್ಯದ ಕೇಂದ್ರ ಸರಕಾರದ ನಡೆಯು ಉತ್ತಮ ಉದಾಹರಣೆಯಾಗಿದೆ. ಆಹಾರ ವಸ್ತುಗಳ ಬೆಲೆಯು ಗಗನಕ್ಕೇರಿದರೂ ಪ್ರತಿಭಟಿಸಲಾರದ ಅಸಹಾ ಯಕ ಸ್ಥಿತಿ ಭಾರತೀಯನದ್ದಾಗಿದೆ. ವಿರೋಧ ಪಕ್ಷಗಳನ್ನು ಅಧಿಕಾರ ಬತ್ತಳಿಕೆಯಿಂದ ಅಸ್ತ್ರ ತೆಗೆದು ಬೆದರಿಸಲಾಗುತ್ತಿದೆ.