9 ತಿಂಗಳುಗಳಿಂದ ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಯುವಕನನ್ನು ಸ್ವದೇಶಕ್ಕೆ ತಲುಪಲು ನೆರವಾದ ಇಂಡಿಯನ್ ಸೋಶಿಯಲ್ ಫಾರಂ

0
12808

ನ್ಯೂಸ್ ಕನ್ನಡ ವರದಿ-(25.07.17): ಸುಮಾರು 9 ತಿಂಗಳುಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಪುತ್ರಬೈಲ್ ಗ್ರಾಮದ ಹೈದರ್ ಅಲಿಯವರು ಮಂಗಳೂರಿನ ಏಜೆಂಟರ ಮೂಲಕ ಸೌದಿ ಅರೇಬಿಯಾಕ್ಕೆ ವಾಹನ ಚಾಲಕನಾಗಿ ಅಗ್ರಿಮೆಂಟ್ ವೀಝದ ಮೂಲಕ ಸೌದಿಗೆ ತಲುಪಿದ್ದರು, ಈ ಸಂದರ್ಭದಲ್ಲಿ ಹೈದರ್ ಅಲಿಯು ಏಜೆಂಟಿನಲ್ಲಿ ಸ್ಪಷ್ಟವಾಗಿ ತನ್ನಲ್ಲಿ ಸೌದಿಯ ವಾಹನ ಪರವಾನಿಗೆ ಇಲ್ಲವೆಂದು ಹೇಳಿದರೂ, ಅದೆನ್ನೆಲ್ಲ ನಾನು ನೋಡಿಕೊಳ್ಳುತ್ತೇನೆ, ನಾನು ನಿನಗೆ ಅಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಸುಳ್ಳು ಹೇಳಿ ಪುಸಲಾಯಿಸಿ ಕಳುಹಿಸಿದ್ದಾರೆ.
ಆದರೆ ಸೌದಿ ಅರೇಬಿಯಾಕ್ಕೆ ಬಂದ ಹೈದರ್ ಅಲಿಯು ತನ್ನ ಕಂಪನಿಯನ್ನು ಸಂಪರ್ಕಿಸಿದಾಗ, ಕಂಪನಿಯು ವಾಹನ ಪರವಾನಿಗೆ ಇಲ್ಲದೆ ಕೆಲಸವನ್ನು ನೀಡವುದಿಲ್ಲವೆಂದು ಹೇಳಿ ಇವರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಈ ಮಧ್ಯೆ ಹಲವು ಬಾರಿ ಏಜೆಂಟನನ್ನು ಸಂಪರ್ಕಿಸಿದ ಹೈದರ್ ಅಲಿಯ ಮನೆಯವರು ಯಾವುದೇ ಪ್ರಯೋಜನವಾಗದೇ ಅಲ್ಲಿಂದ ಕೇವಲ ಉಡಾಫೆಯ ಉತ್ತರಗಳು ಮಾತ್ರ ಸಿಗುತ್ತಿದ್ದವು .