ಅನಿವಾಸಿ ಕನ್ನಡಿಗರ‌‌‌ ಒಕ್ಕೂಟದ ಸಹಕಾರ: ವಿದೇಶದಲ್ಲಿ ಮೃತಪಟ್ಟ ಕುಂದಾಪುರ ನಿವಾಸಿ ಶೈಬಾನಿ ಆಲಂ ಮೃತದೇಹ ಊರಿಗೆ

0
83

ಸನ್ಮಾರ್ಗ ವಾರ್ತೆ

ಅನಿವಾಸಿ ಕನ್ನಡಿಗರ ಒಕ್ಕೂಟ UAE ಇದರ ಸಹಕಾರದಿಂದ ಕುಂದಾಪುರದ ಶಿರೂರು ನಿವಾಸಿ ಮುಹಮ್ಮದ್ ಶೈಬಾನಿ ಆಲಂರವರ  ಮೃತದೇಹವು ಡಿಸೆಂಬರ್ 1ರಂದು ತಾಯ್ನಾಡಿಗೆ ತಲುಪಿದೆ.

ಕುಂದಾಪುರದ ಶಿರೂರ್ ನಿವಾಸಿಯಾದ ಮುಹಮ್ಮದ್ ಶೈಬಾನಿ ಆಲಂರವರು ನವೆಂಬರ್ 23ರಂದು ಬೆಳಗಿನ ಜಾವ ಮೃತರಾಗಿದ್ದರು. ಅನಿವಾಸಿ ಕನ್ನಡಿಗರ ಒಕ್ಕೂಟ  ಯು. ಏ.ಇ ಇದರ ಅಬ್ದುಲ್ ಮುಜಿಬ್ ಮುಸ್ತಾಕ್, ಶಾಕಿರ್, ಇಲ್ಯಾಸ್, ಇಬಾದ್ ಹಾಗೂ ಸಾದಿಕ್ ಇವರ ಸತತ ಪ್ರಯತ್ನದಿಂದ ಡಿಸೆಂಬರ್ 1 ರಂದು ಮೃತದೇಹವನ್ನು ತಾಯ್ನಾಡಿಗೆ ತಲುಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ.