ಸನ್ಮಾರ್ಗ ವಾರ್ತೆ
ಅಬುಧಾಬಿ: ಪೊಲೀಸ್ ಯೂನಿಫಾರಂ ಧರಿಸಿ ನಗರದಲ್ಲಿ ಸುತ್ತಾಡಬೇಕು ಎಂಬುದು ಪುಟ್ಟ ಸಹೋದರರಾದ ಹಮದ್ ಮತ್ತು ಆವೇಶ್ ಅವರ ಬಯಕೆಯಾಗಿತ್ತು. ಇದೀಗ ದುಬೈ ಪೊಲೀಸರು ಈ ಮಕ್ಕಳಿಬ್ಬರ ಆಸೆಯನ್ನು ಈಡೇರಿಸಿದ್ದಾರೆ.
ದುಬೈ ಪೊಲೀಸ್ ಲೀಡರ್ಸ್ ಅಟ್ ಯುವರ್ ಸರ್ವಿಸ್ ಎಂಬ ಪೊಲೀಸ್ ಆಪನ್ನು ಬಳಸಿ ಮಕ್ಕಳ ಈ ಬಯಕೆಯನ್ನು ಅವರ ಹೆತ್ತವರು ಪ್ರಕಟಿಸಿದ್ದರು. ಪೊಲೀಸ್ ಆಫೀಸರುಗಳ ಬದುಕನ್ನು ತಿಳಿಯಬೇಕು ಮತ್ತು ಸೂಪರ್ ಕಾರ್ ನಲ್ಲಿ ಸಂಚರಿಸಬೇಕು ಎಂಬುದು ಈ ಮಕ್ಕಳ ಆಗ್ರಹವಾಗಿತ್ತು. ವಿಷಯ ತಿಳಿದ ಪೊಲೀಸರು ಇವರಿಬ್ಬರನ್ನು ಸಂಪರ್ಕಿಸಿದ್ದಲ್ಲದೆ ಅವರಿಗೆ ಪೊಲೀಸ್ ಉಡುಪನ್ನು ಹೊಲಿದು, ಉಡುಗೊರೆಯನ್ನೂ ಕೊಟ್ಟು ಪೊಲೀಸ್ ವಾಹನದಲ್ಲಿ ನಗರವನ್ನು ಸುತ್ತಾಡಿಸಿದ್ದಾರೆ. ಮಕ್ಕಳ ಬಯಕೆಯನ್ನು ಈಡೇರಿಸುವುದು ಪೊಲೀಸರ ಒಂದು ನೀತಿಯಾಗಿದ್ದು ಮಕ್ಕಳಲ್ಲಿ ಪಾಸಿಟಿವ್ ಎನರ್ಜಿ ಉಂಟು ಮಾಡಲು ಇಂಥ ಕೆಲಸವನ್ನು ನಾವು ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.