ಆಲಪ್ಪುಝ,ಆ.20: ನಗರದ ಝಕರಿಯ್ಯ ಬಝಾರ್ ಮತ್ತು ವಟ್ಟಪ್ಪಳ್ಳಿಯ ರಸ್ತೆಯಲ್ಲಿ ಆ ಮನುಷ್ಯ ನಡೆದು ಹೋಗುತ್ತಿದ್ದಾರೆ. ಸುಮ್ಮನೇ ನಡೆದಾಡುವುದಲ್ಲ. ಪ್ರೀತಿಯ ನಡೆಯುವಿಕೆಯದು. ಕೆಲವು ದಿವಸಗಳ ಮುಂಚೆ ಅವರು ಬೈಕ್ನಲ್ಲಿ ಅಡ್ಡಾಡುತ್ತಿದ್ದರು. ಯಮಾಹಾ ಎಸ್.ಸೆಡಿಲ್. ಆದರೆ ಗುಡ್ಡ ಕುಸಿತ, ನೆರೆಹಾವಳಿಯು ತನ್ನ ಊರನ್ನು ಕಾಡಿದಾಗ ಅದರಿಂದ ಅನಾಥರಂತಾದ ಸಹೋದರರ ಸಹಾಯಕ್ಕೆ ತನ್ನ ಬೈಕನ್ನು ಕೊಟ್ಟು ಅವರು ಬರಿಗಾಲಲ್ಲಿ ನಡೆದು ಸಾಗಿದರು.
ವಟ್ಟಪ್ಪಳ್ಳಿ ಜಾಫರ್ ಜುಮಾ ಮಸೀದಿ ಮದ್ರಸದಲ್ಲಿ ಆರಂಭಿಸಿದ ನಿರಾಶ್ರಿತರಿಗೆ ವಸ್ತುಗಳನ್ನು ನೀಡುವಾಗ ತನ್ನ ಮುಖವನ್ನು ಯಾರಿಗೂ ತೋರಿಸಬಾರದು. ತನ್ನ ಹೆಸರು ವಿಳಾಸವನ್ನು ಯಾರಿಗೂ ಹೇಳಬಾರದು ಎಂದು ಅವರು ಶರ್ತ ವಿಧಿಸಿದ್ದರು. ಅಂದು ರಾತ್ರೆಯ ನಡೆದ ಏಲಂನಲ್ಲಿ ಬೈಕ್ 11,000ಕ್ಕೆ ಮಾರಾಟವಾಯಿತು. ಆ ಮೊತ್ತವನ್ನು ಸಂತ್ರಸ್ತರ ಪರಿಹಾರ ನಿಧಿಗೆ ಬಳಸಿಕೊಳ್ಳಲಾಯಿತು. ನಂತರ ಬೈಕ್ ನ ಮಾಲಕ ಯಾರು ಎಂದು ಅರಿಯುವ ಕುತೂಹಲ ಊರವರಲ್ಲಿ ಮೂಡಿತು.
ಈ ನಡುವೆ ಸಿನೆಮಾ ನಿರ್ದೇಶಕ ಗಫೂರ್ ಇಲ್ಯಾಸ್ ಎಂಬವರು ವ್ಯಕ್ತಿಯ ಹಿಂಬದಿಯ ಫೋಟೊವನ್ನು ಫೇಸ್ಬುಕ್ನಲ್ಲಿ ಹಾಕಿದರು. ಒಟ್ಟು ಅವರಲ್ಲಿದ್ದುದು ಒಂದು ಬೈಕ್ ಅದನ್ನು ನೆರೆ ಸಂತ್ರಸ್ತರ ಸಹಾಯ ನಿಧಿಗೆ ಕೊಟ್ಟಿದ್ದಾರೆ. ನೀವು ಮಹತ್ತರ ಮಾದರಿಯಾಗಿದ್ದೀರಿ. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ದೇವನು ಪ್ರತಿಫಲವನ್ನು ನೀಡಲಿ ಎಂದು ಊರ ಜನತೆ ಈ ವ್ಯಕ್ತಿಗೆ ಶುಭ ಹಾರೈಸಿದ್ದಾರೆ.
ಮುಖ ತೋರಿಸಿಲ್ಲ ಆದರೆ ಅನುಮತಿಯಿಲ್ಲದೆ ಫೋಟೊ ತೆಗೆದದ್ದಕ್ಕೆ ಅವರಲ್ಲಿ ಗಫೂರ್ ಕ್ಷಮೆ ಯಾಚಿಸಿದ್ದಾರೆ. ಸುದ್ದಿಗಾಗಿ ಅವರನ್ನು ಸಂಪರ್ಕಿಸಿದರೂ ವಿಳಸವನ್ನು ಇನ್ನೊಮ್ಮೆ ಭೇಟಿಯಾದಾಗ ನೀಡುವೆ ಎಂದು ಹೇಳಿ ಆ ಪುಣ್ಯಾತ್ಮ ಹಿರಿಯ ವ್ಯಕ್ತಿ ಹೊರಟು ಹೋದರು.












