ಕಾಶ್ಮೀರದಲ್ಲಿ ಕಲ್ಲೆಸೆತ; ಟ್ರಕ್ ಡ್ರೈವರ್ ಸಾವು; ಆರೋಪಿಗಳ ಬಂಧನ

0
678

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.26: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರ ಕಲ್ಲೆಸತದಿಂದ ಟ್ರಕ್ ಚಾಲಕ ಮೃತಪಟ್ಟಿದ್ದಾನೆ. ಸರದಿಪುರ ಎಂಬಲ್ಲಿ ನೂರ್ ಮುಹಮ್ಮದ್ ದರ್(42) ಮೃತಪಟ್ಟ ಚಾಲಕನಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೂರ್ ಮುಹಮ್ಮದ್‍ ದರ್‌ರವರ ಜೆ.ಕೆ.03 ಎಫ್ 2540 ನಂಬರಿನ ಟ್ರಕ್ ಅನ್ನು ವಿಶೇಷ ದಳದ ವಾಹನವಾಗಿ ಉಪಯೋಗಿಸಲಾಗಿತ್ತು. ರವಿವಾರ ಸಂಜೆ ಇವರು ಮನೆಗೆ ಮರಳಿ ಹೋಗುವಾಗ ಭಿಜ್‍ಭೇರ ಲೈನ್‍ನನಲ್ಲಿ ವಾಹನಕ್ಕೆ ಕಲ್ಲೆಸೆತವಾಗಿದೆ. ಸೇನೆಯ ವಾಹನವೆಂದು ತಿಳಿದು ಪ್ರತಿಭಟನಾಕಾರರು ಟ್ರಕ್‍ಗೆ ಕಲ್ಲೆಸೆದಿದ್ದರು. ವಾಹನದ ಗಾಜು ಒಡೆದು ಚಾಲಕ ತಲೆಗೆ ಕಲ್ಲು ಬಡಿದಿತ್ತು. ಗಾಯಗೊಂಡ ಅವರನ್ನು ಭಿಜ್‍ಭೇರ ಆಸ್ಪತ್ರೆಗೆ ಹಾಗೂ ನಂತರ ಸೌರದ ಸ್ಕೀಂಸ್ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕಿ ಉಳಿಯಲಿಲ್ಲ. ಭಿಜ್‍ಬೇರ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪದಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ. ಇತ್ತೀಚೆಗೆ ಶ್ರೀನಗರದಲ್ಲಿ ನಡೆದ ಕಲ್ಲೆಸತದಲ್ಲಿ ಬಾಲಕಿಯೊಬ್ಬಳು ಗಾಯಗೊಂಡಿದ್ದಳು.