ಮೇಲಧಿಕಾರಿಗೆ ಗುಂಡುಹಾರಿಸಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಸೈನಿಕ

0
838

ಸನ್ಮಾರ್ಗ ವಾರ್ತೆ

ಚೆನ್ನೈ,ಆ.28: ಕ್ವಾಟ್ರಸ್‌ನಲ್ಲಿ ನಿದ್ರಿಸುತ್ತಿದ್ದ ಸೇನಿಕಾಧಿಕಾರಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ ಬಳಿಕ ಸೈನಿಕನೊಬ್ಬ ಸ್ವಯಂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚೆನ್ನೈ ಪಲ್ಲಾವರಂ ಆರ್ಮಿ ಕಂಟೋನ್ಮೆಂಟ್ ಕ್ವಾಟ್ರಸ್‌ನ ಹವಾಲ್‍ದಾರ್, ಉತ್ತರಾಖಂಡದ ನಿವಾಸಿ ಪ್ರವೀಣ್‍ಕುಮಾರ್ ಜೋಷಿ(35) ಹತ್ಯೆಯಾಗಿದ್ದಾರೆ.

ಇವರ ಕೈಕೆಳಗೆ ಕೆಲಸಮಾಡುವ ಸೈನಿಕ ಜಗ್‍ಶೀರ್(30) ಅಧಿಕೃತ ರೈಫಲ್ ಉಪಯೋಗಿಸಿ ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹಗಳನ್ನು ಸೈನಿಕ ಆಸ್ಪತ್ರೆಗೆ ತರಲಾಗಿದೆ. ಮಂಗಳವಾರ ಬೆಳಗ್ಗೆ ಮೂರು ಗಂಟೆಗೆ ಘಟನೆ ನಡೆದಿದೆ. ಸರಿಯಾಗಿ ಕೆಲಸಕ್ಕೆ ಬಂದಿಲ್ಲ ಎಂದು ರೈಫಲ್‍ಮೆನ್ ಆಗಿರುವ ಜಗ್‍ಶೀರ್‌ನ್ನು ಪ್ರವೀಣ್‍ಕುಮಾರ್ ತರಾಟೆಗೆ ತೆಗೆದುಕೊಂಡಿದ್ದರು.