ಸನ್ಮಾರ್ಗ ವಾರ್ತೆ
ತೃಶೂರ್,ಆ.28: ವಿದ್ಯುತ್ ಬಿಲ್ ಬಾಕಿ ಇರಿಸಿದ ಪರಿಣಾಮ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ 19,000 ಬಿಎಸ್ಎನ್ಎಲ್ ಟವರ್ಗಳು ಸ್ಥಗಿತವಾಗಿದೆ. ಟವರ್ಗೆ ಜಾಗಕೊಟ್ಟವರಿಗೂ ಬಾಡಿಗೆ ಬಾಕಿ ಇರಿಸಲಾಗಿದೆ. ಸಾಲ ಬಾಕಿ ಪಾವತಿಸುವ ಪ್ರಯತ್ನವೂ ನಡೆಯುತ್ತಿಲ್ಲ. ಬಿಎಸ್ಎನ್ಎಲ್ಗೆ ಒಟ್ಟು 70,000 ಟವರ್ಗಳಿವೆ. ಇನ್ನೂ ಕೆಲವು ಟವರ್ಗಳಿಗೂ ಇಂತಹದೇ ಸಮಸ್ಯೆ ಎದುರಿಸುತ್ತಿವೆ. ಕೇರಳದಲ್ಲಿ ಕೇರಳ ಸರಕಾರ ಮಧ್ಯಪ್ರವೇಶಿಸಿ ವಿದ್ಯುತ್ ಸಂಪರ್ಕ ಕಡಿಯದಂತೆ ನೋಡಿಕೊಂಡಿದೆ.
ಬಿಲ್ ಬಾಕಿ ಇಟ್ಟದ್ದರಿಂದ ಇತರ ಬೇರೆ ಬೇರೆ ರಾಜ್ಯಗಳ ವಿದ್ಯುತ್ ಮಂಡಳಿ ಬಿಎಸ್ಎನ್ಎಲ್ ಟವರ್ಗಳಿಗೆ ಮತ್ತು ಎಕ್ಸ್ಚೇಂಜ್ಗಳಿಗೆ ಕನೆಕ್ಷನ್ ಕಡಿಯುತ್ತಿದೆ. ಲೋಕಸಭಾ ಚುನಾವಣೆ ಕಾಲದಲ್ಲಿ ಬಿಎಸ್ಎನ್ಎಲ್ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದ ಕಾರಣ ವಿದ್ಯುತ್ ಕಡಿತವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಈಗ ಪುನಃ ಬಿಲ್ ಬಾಕಿ ಕಾರಣದಿಂದ ವಿದ್ಯುತ್ ಮಂಡಳಿಗಳು ಕ್ರಮ ಜರಗಿಸತೊಡಗಿವೆ. ಕೇರಳದಲ್ಲಿ ಬಿಎಸ್ಎನ್ಎಲ್ ಸರ್ಕಲ್ ಮುಖ್ಯಸ್ಥರು ಮತ್ತು ಸಿಬ್ಬಂದಿಗಳ ಸಂಘಟನೆ ನಾಯಕರು ಕೇರಳದ ವಿದ್ಯುತ್ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದರಿಂದ ಸಂಪರ್ಕ ಕಡಿಯದೆ ಇರಿಸಲಾಗಿದೆ. ಆದರೆ ಬಿಲ್ ಪಾವತಿ ಬಗ್ಗೆ ಯಾವ ಕ್ರಮವೂ ಜರಗಿಸಲಾಗುತ್ತಿಲ್ಲ. ಆದ್ದರಿಂದ ಬಿಲ್ ಬಾಕಿ ಹೆಚ್ಚುತ್ತಾ ಹೋಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.












