ಸನ್ಮಾರ್ಗ ವಾರ್ತೆ
ರಿಯೊ ಡಿಜನೈರೊ: ಅಮೆಝಾನ್ ಕಾಡಿನಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ನಿಯಂತ್ರಿಸುವ ಸಲುವಾಗಿ ಜಿ7 ದೇಶಗಳು ಸಹಾಯ ಮಾಡುವುದಾಗಿ ಹೇಳಿದ ಧನ ಸಹಾಯವನ್ನು ಬ್ರೆಝಿಲ್ ತಿರಸ್ಕರಿಸಿದೆ.
ಫ್ರಾನ್ಸಿನಲ್ಲಿ ನಡೆದಿದ್ದ ಶೃಂಗದಲ್ಲಿ 120 ಬಿಲಿಯನ್ ಡಾಲರ್ ಸಹಾಯ ವಾಗ್ದಾನ ನೀಡಲಾಗಿತ್ತು.ಆದರೆ ಈ ಹಣ ನಮಗೆ ಬೇಡ. ಇದು ಯುರೋಪಿನಲ್ಲಿ ಮರಗಳನ್ನು ಬೆಳೆಸಲು ಉಪಯೋಗಿಸಿ ಎಂದು ಬ್ರೆಝಿಲ್ ಅಧ್ಯಕ್ಷ ಜೆಯ್ರ್ ಬೊಲ್ಸನಾರೊ ಹೇಳಿದರು. ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಅಮೆರಿಕ 20 ಮಿಲಿಯನ್ ಡಾಲರ್ ಸಹಾಯ ಧನಕ್ಕೆ ಮುಂದೆ ಬಂದಿದ್ದವು. ನೀವು ನೀಡಿದ ಸಹಾಯ ಕೊಡುಗೆಗೆ ಅಭಿನಂದಿಸುತ್ತೇವೆ. ಆದರೆ ಯುರೋಪಿನ ಕಾಡು ನಾಶದ ವಿರುದ್ಧ ಈ ಹಣ ಉಪಯೋಗಿಸಿ ಎಂದು ಬೊಲ್ಸನಾರೊ ಹೇಳಿದ್ದಾರೆ.












