ಸನ್ಮಾರ್ಗ ವಾರ್ತೆ
ಟೆಹ್ರಾನ್,ಆ.28: ದಿಗ್ಬಂಧನವನ್ನು ತೆರವುಗೊಳಿಸದೆ ಅಮೆರಿಕದೊಂದಿಗೆ ಚರ್ಚಿಸುವ ಪ್ರಶ್ನೆಯೇ ಇಲ್ಲ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದರು. 2015ರ ಅಣು ಒಪ್ಪಂದ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸಲು ವಾರದೊಳಗೆ ರೂಹಾನಿಯೊಂದಿಗೆ ಚರ್ಚೆಗೆ ತಾನು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು. ಇರಾನ್ ವಿರುದ್ಧ ದಿಗ್ಬಂಧನ ಕೊನೆಗೊಳಿಸುವ ಉದ್ದೇಶದಲ್ಲಿ ಇಟ್ಟ ಮೊದಲ ಹೆಜ್ಜೆ ಇದು ಎಂದು ಟ್ರಂಪ್ ಬಣ್ಣಿಸಿದ್ದರು.
ನಾವು ಅಣುಬಾಂಬು ತಯಾರಿಸಲು ಬಯಸಿಲ್ಲ. ಪರಂಪರಾಗತ ಆಯುಧಗಳನ್ನು ಇರಾನಿನ ಸೈನಿಕರು ಬಳಸುವುದು. ಕ್ರಿಯಾತ್ಮಕ ತೀರ್ಮಾನಗಳನ್ನು ಅಮೆರಿಕ ತೆಗೆದುಕೊಳ್ಳಬೇಕು. ಇರಾನ್ ವಿರುದ್ಧ ಕಾನೂನು ಬಾಹಿರವಾಗಿ ದಿಗ್ಬಂಧನ ಹಾಕಲಾಗಿದೆ. ಅದನ್ನು ತೆರವು ಗೊಳಿಸಿದ ನಂತರವೇ ಚರ್ಚಿಸೋಣ ಎಂದು ರೂಹಾನಿ ಹೇಳಿದರು. ಅಣು ಒಪ್ಪಂದದಿಂದ ಟ್ರಂಪ್ ಹಿಂದೆ ಸರಿದು ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನವನ್ನು ಹೇರಲಾಗಿದೆ. ನಂತರ ಇರಾನಿನ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ.












