ಬಾಬರಿ: ಮುಸ್ಲಿಂ ವಿಭಾಗಕ್ಕೆ ಲಭಿಸಿದ ಭೂಮಿ ನಮ್ಮದು, ಅದನ್ನು ಹಿಂದೂಗಳಿಗೆ ಬಿಟ್ಟುಕೊಡಲು ಸಿದ್ಧ- ಶಿಯಾ ವಕ್ಫ್ ಬೋರ್ಡ್

0
1397

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.31: ಬಾಬರಿ ಭೂ ವಿವಾದಕ್ಕೆ ಸಂಬಂಧಿಸಿ ಅಲಾಹಬಾದ್ ಹೈಕೋರ್ಟು ಮುಸ್ಲಿಂ ವಿಭಾಗಕ್ಕೆ ನೀಡಿದ್ದ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ಹಿಂದೂಗಳಿಗೆ ಬಿಟ್ಟುಕೊಡಲು ಸಿದ್ಧ ಎಂದು ಶಿಯಾ ವಕ್ಫ್ ಬೋರ್ಡ್ ತಿಳಿಸಿದೆ. 2.77 ಎಕರೆ ಜಮೀನು ಮೂರು ಭಾಗವನ್ನಾಗಿ ಹೈಕೋರ್ಟು ಪಾಲು ಮಾಡಿತ್ತು. ಒಂದು ಭಾಗವನ್ನು ಮುಸ್ಲಿಮರಿಗೆ ಹಂಚಿತ್ತು. ಈ ಭೂಮಿ ತಮ್ಮದೆಂದು ಶಿಯಾ ವಿಭಾಗ ಹೇಳುತ್ತಿದೆ. ಬಾಬರನ ಸೇನಾಧಿಪತಿ ಮೀರ್‍ಬಾಕಿ ಬಾಬರಿ ಮಸೀದಿಯ ಪರಿಪಾಲಕನಾಗಿದ್ದ. ಆತ ಶಿಯಾ ವಿಭಾಗದವನಾಗಿದ್ದನು ಎಂದು ಶಿಯಾ ವಿಭಾಗಕ್ಕೆ ಸೇರಿದ ವಕೀಲ ಎಂಎಸ್ ಧಿಂಗ್ರಾ ವಾದಿಸಿದ್ದಾರೆ.

ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆಯ ಐವರ ಸಂವಿಧಾನ ಪೀಠ ಮುಂದೆ ಧಿಂಗ್ರಾ ವಾದ ಮಂಡಿಸಿದ್ದಾರೆ. ನಾವು ಹಿಂದೂ ವಿಭಾಗವನ್ನು ಬೆಂಬಲಿಸುತ್ತೇವೆ ಎಂದು ಶಿಯಾ ಪರ ವಕೀಲರು ಹೇಳಿದರು. ಆದರೆ ಬಾಬರಿ ಮಸೀದಿ ವಿಭಜಿಸಿ ಆಲಾಹಬಾದ್ ಹೈಕೋರ್ಟು ಕೊಟ್ಟಿರುವುದು ಮುಸ್ಲಿಮರಿಗೆ. ಶಿಯಾ ವಿಭಾಗಕ್ಕೆ ಹೈಕೋರ್ಟು ಕೊಟ್ಟಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲರು ವಾದಿಸಿದರು.