ಇಸ್ಲಾಮಾಬಾದ್,ಸೆ.2: ಬೇಹುಗಾರಿಕೆ ನಡೆಸಿದ್ದಾರೆಂದು ಆರೋಪಿಸಲ್ಪಟ್ಟು ಪಾಕಿಸ್ತಾನ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿರುವ ಕುಲ್ಭೂಷಣ್ ಜಾದವ್ರಿಗೆ ರಾಜತಾಂತ್ರಿಕ ನೆರವು ಒದಗಿಸಿಕೊಡುವುದಾಗಿ ಪಾಕಿಸ್ತಾನ ಸರಕಾರ ಹೇಳಿದೆ. ಕುಲ್ಭೂಷಣ್ ಪಾಕಿಸ್ತಾನದ ಜೈಲಿನಲ್ಲಿದ್ದಾರೆ.ಇಂದು ಇದಕ್ಕೆ ಬೇಕಾದ ಸೌಲಭ್ಯ ಮಾಡಿಕೊಡುತ್ತೇವೆ. ಅವರು ಭಾರತ ರಾಜತಾಂತ್ರಿಕ ಕಚೇರಿಯನ್ನು ಸಂಪರ್ಕಿಸುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಡುತ್ತೇವೆ ಎಮದು ಪಾಕಿಸ್ತಾನ ವಿದೇಶ ವಕ್ತಾರ ಮುಹಮ್ಮದ್ ಫೈಝಲ್ ತಿಳಿಸಿದರು. “ವಿಯನ್ನಾ ಕನ್ವೆನ್ಶನ್ ಪ್ರಕಾರ ಮತ್ತು ಅಂತಾರಾಷ್ಟ್ರೀಯ ಕೋರ್ಟಿನ ಆದೇಶವನ್ನು ಗೌರವಿಸಿ ಕುಲ್ಭೂಷಣ್ರಿಗೆ ರಾಜತಾಂತ್ರಿಕ ಸಹಾಯ ಲಭ್ಯಗೊಳಿಸಲಾಗುವುದು ಎಂದು ವಿದೇಶ ವಕ್ತಾರ ತಿಳಿಸಿದರು.












