ಬಾಬರಿ ಭೂ ವಿವಾದ: ವಕ್ಫ್‌ ಪರ ವಕೀಲರಿಗೆ ಬೆದರಿಕೆ ಪತ್ರ; ದೂರು ಸ್ವೀಕರಿಸಿದ ಸುಪ್ರೀಂಕೋರ್ಟು

0
855

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ. 2: ಅಯೋಧ್ಯೆ ಜನ್ಮಭೂಮಿ ಪ್ರಕರಣದಲ್ಲಿ ವಕ್ಫ್ ಬೋರ್ಡಿಗಾಗಿ ಹಾಜರಾಗಿರುವ ವಕೀಲ ರಾಜೀವ್ ಧವನ್ ವಿರುದ್ಧ ಬೆದರಿಕೆ ಹಾಕಲಾಗಿದ್ದು, ಸುಪ್ರೀಂಕೋರ್ಟು ಅವರ ದೂರನ್ನು ಸ್ವೀಕರಿಸಿದೆ. ವಕೀಲ ರಾಜೀವ್ ಧವನ್‍ರ ದೂರನ್ನು ಸ್ವೀಕರಿಸುವುದಾಗಿ ಸುಪ್ರೀಂಕೋರ್ಟು ತಿಳಿಸಿತು. ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ರಾಜೀವ್ ಧವನ್ ವಕ್ಫ್ ಬೋರ್ಡ್ ಪರ ಹಾಜರಾಗುತ್ತಿದ್ದು ಅವರಿಗೆ ಚೆನ್ನೈಯ 88 ವರ್ಷ ವಯಸ್ಸಿನ ಪ್ರೊಫೆಸರ್ ಬೆದರಿಕೆ ಹಾಕಿ ಪತ್ರ ಬರೆದಿದ್ದರು.

ಆಗಸ್ಟ್ ಹದಿನಾಲ್ಕ ರಂದು ಎನ್.ಶಣ್ಮುಖಂ ಎನ್ನುವ ವ್ಯಕ್ತಿ ಮತ್ತು ಸಂಜಯ್ ಕಲಾಲ್ ಬಜ್ರಂಗಿ ಎನ್ನುವ ಇನ್ನೊಬ್ಬ ವ್ಯಕ್ತಿ ರಾಜೀವ್ ಧವನ್‍ರಿಗೆ ಬೆದರಿಕೆ ಹಾಕಿದ್ದಾರೆ. 1941ರಿಂದ 50 ಲಕ್ಷ ಬಾರಿ ನಾನು ಗಾಯಂತ್ರಿ ಮಂತ್ರ ಜಪಿಸಿರುವೆ. 27,000 ಬಾರಿ ಯಾದಾರೂ ಭಗವದ್ಗೀತೆ ಓದಿರುವೆ. ಆ ನಾಲಿಗೆಯಿಂದ ನಿಮಗೆ ಶಾಪಹಾಕುತ್ತಿದ್ದೇನೆ. ನೀವು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಲಿದೆ. ನಿಮ್ಮ ದೃಷ್ಟಿ ಮತ್ತು ಶ್ರವಣ ಶಕ್ತಿ ಇಲ್ಲದಾಗಲಿ. ನಿಮ್ಮ ಕುಟುಂಬ ನನ್ನ ಶಾಪದಲ್ಲಿ ನಾಶವಾಗಲಿದೆ ಎಂದು ಪ್ರೊಫೆಸರ್ ಶಣ್ಮುಗಂ ಬೆದರಿಕೆ ಪತ್ರದಲ್ಲಿ ಬರೆದಿದ್ದಾರೆ.