ಸನ್ಮಾರ್ಗ ವಾರ್ತೆ-
ಮಂಗಳೂರು: ಸೆ. 6: ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಅಮೀನುಲ್ ಹಸನ್ ಅವರು ನಾಳೆ (ಸೆ. 7) ಮಂಗಳೂರಿಗೆ ಆಗಮಿಸಲಿದ್ದು , ಸೆ. 8ರಂದು ನಡೆಯಲಿರುವ ಜಿಐಓ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. “ಬದಲಾವಣೆಗಾಗಿ ವಿಚಾರಗಳ ಮರು ಚಿಂತನೆ” ಎಂಬ ಕೇಂದ್ರೀಯ ವಿಷಯದ ಮೇಲೆ ಆ. 26 ರಿಂದ ಸೆ. 1 ರವರೆಗೆ ರಾಜ್ಯ ವ್ಯಾಪಿ ನಡೆದ ಜಿಐಓ ಅಭಿಯಾನದ ಬಳಿಕ ಸೆ. 8ರಂದು ಮಂಗಳೂರಿನ ಪುರಭವನದಲ್ಲಿ ಏಕದಿನ ಸಮ್ಮೇಳನ ನಡೆಯುತ್ತಿದ್ದು, ಬೆಳಿಗ್ಗೆ 10 ಗಂಟೆಗೆ ಅಮೀನುಲ್ ಹಸನ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಸೆ. 7 ರಂದು ಜಮಾಅತೆ ಇಸ್ಲಾಮಿ ಹಿಂದ್ ದ ಕ ಜಿಲ್ಲಾ ಬಂಧುಗಳನ್ನು ಉದ್ದೇಶಿಸಿ ಮಂಗಳೂರಿನ ಹಿದಾಯತ್ ಸೆಂಟರ್ ನಲ್ಲಿ ಮಾತಾಡಲಿದ್ದಾರೆ.
ಹಾಗೆಯೇ, ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದ ಗಣ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಜೊತೆ ಸಂಜೆ 7 ಗಂಟೆಗೆ ವಿಚಾರ ವಿನಿಮಯ ನಡೆಸಲಿದ್ದಾರೆ. ಜೊತೆಗೆ ಸೆ. 8 ರಂದು ಸಂಜೆ 7 ಗಂಟೆಗೆ ಉಡುಪಿಯ ಮುಸ್ಲಿಂ ಸಮುದಾಯದ ಗಣ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಜೊತೆ ವಿಚಾರವಿನಿಮಯ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.












