ಸನ್ಮಾರ್ಗ ವಾರ್ತೆ
ತಿರುವನಂತಪುರಂ,ಸೆ.7: ಕಮಲಾ ಸುರಯ್ಯಾ ಪೌಂಡೇಷನ್ ಮತ್ತು ಕತರ್ ಅನಿವಾಸಿ ಸಾಂಸ್ಕೃತಿಕ ವೇದಿಕೆಯಾದ ಫ್ರಂಡ್ಸ್ ಕಲ್ಚರಲ್ ಸೆಂಟರ್ ದೋಹ ಎಫ್ಸಿಸಿ ಸೇರಿ ನೀಡುತ್ತಿರುವ ಕಮಲಾ ಸುರಯ್ಯಾ ಪ್ರಶಸ್ತಿ ಘೋಷಣೆಯಾಗಿದೆ. ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಒ.ವಿ ಉಷಾ ಮತ್ತು ಮಾಧ್ಯಮ ಕ್ಷೇತ್ರದ ಸಮಗ್ರ ಕೊಡುಗೆಗಾಗಿ ಮಾಧ್ಯಮಂ ಗ್ರೂಪ್ ಎಡಿಟರ್ ಒ.ಅಬ್ದುರ್ರಹ್ಮಾನ್ರವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಕಮಲಾ ಸುರಯ್ಯಾ ಪ್ರತಿಭಾ ಪ್ರಶಸ್ತಿ ಅಲಂಗೋಡ್ ಲೀಲಾ ಕೃಷ್ಣನ್, ಡಾ.ವಳ್ಳಿಕ್ಕಾವ್ ಮೋಹನ್ದಾಸ್ ಆಯ್ಕೆಯಾಗಿದ್ದಾರೆ.












