ಸನ್ಮಾರ್ಗ ವಾರ್ತೆ
ಬೆಂಗಳೂರು,ಸೆ.10: ಇಸ್ರೋ ಅಧ್ಯಕ್ಷ ಕೆ.ಶಿವನ್ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ಇಲ್ಲ ಎಂದು ಇಸ್ರೋ ತಿಳಿಸಿದೆ. ಟ್ವಿಟ್ಟರ್ನಲ್ಲಿ ಅವರ ಹೆಸರಿನಲ್ಲಿ ಕಳೆದ ದಿವಸ ನಕಲಿ ಟ್ವೀಟ್ಗಳು ಪ್ರತ್ಯಕ್ಷವಾಗಿದ್ದವು. ನಂತರ ಇಸ್ರೋ ಸ್ಪಷ್ಟೀಕರಣ ನೀಡಿದ್ದು ಶಿವನ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅಧ್ಯಕ್ಷರ ಹೆಸರಿನಲ್ಲಿ ಯಾರೋ ಖಾತೆ ತೆರೆದು ಕಿತಾಪತಿ ಮಾಡುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ಶಿವನ್ರಿಗೆ ಖಾಸಗಿ ಖಾತೆಯಿಲ್ಲ ಎಂದು ಇಸ್ರೋ ಟ್ವೀಟ್ ಮಾಡಿದ್ದ ನಕಲಿ ಖಾತೆ ಸೃಷ್ಟಿಸಿದ ತಿಳಿಗೇಡಿಗಳ ವಿರುದ್ಧ ಕ್ರಮಜರಗಿಸಲು ಮುಂದಾಗಿದ್ದಾರೆ.












