ಕೇರಳ: ಭಾರೀ ಮಳೆಗೆ ಯಹೂದಿಯರ 400 ವರ್ಷ ಹಳೆಯ ಸಿನೆಗೊಗ್ ಕುಸಿತ

0
1164

ಸನ್ಮಾರ್ಗ ವಾರ್ತೆ

ಮಟ್ಟಂಚೇರಿ,ಸೆ.10: ಭಾರೀ ಮಳೆಗೆ ಮಟ್ಟಂಚೇರಿಯ ಕಪ್ಪುವರ್ಣೀಯ ಯಹೂದಿಯರಿಗೆ ಸೇರಿದ ಸಿನೆಗೊಗ್ ಭಾಗಶಃ ಕುಸಿತಗೊಂಡಿದೆ. ಉಳಿದ ಭಾಗಗಳು ಕೂಡ ಕುಸಿಯುವ ಭೀತಿಯಲ್ಲಿದೆ. ಸುಮಾರು 400 ವರ್ಷ ಹಳೆಯ ಇತಿಹಾಸವುಳ್ಳ ಕಟ್ಟಡ ಇದಾಗಿದ್ದು ಇಂದು ಬೆಳಗ್ಗೆ 11:15ಕ್ಕೆ ಕುಸಿದಿದೆ. ಕೊಚ್ಚಿಯಲ್ಲಿ ಕಪ್ಪು ಯಹೂದಿಗಳು (ಮಲಬಾರಿನ ಯಹೂದಿಯರು) ಬಿಳಿ ಯಹೂದಿಗಳು (ವಿದೇಶೀ ಯಹೂದಿಯರು)ಗಳ ನಡುವೆ ತಾರತಮ್ಯದ ಗುರುತು ಕೂಡ ಈ ಸಿನೆಗೊಗ್ ಆಗಿತ್ತು. ಹಕ್ಕು ವಿವಾದದಲ್ಲಿ ಒಂದು ಗುಂಪು ಸಿನೆಗೊಗ್‍ನ ಬಾಗಿಲು ಜೆಸಿಬಿ ಉಪಯೋಗಿಸಿ ಕೆಡವಿದ್ದರು. ಬಹಳ ಸಮಯದಿಂದ ಇಲ್ಲಿ ಪ್ರಾರ್ಥನೆ ನಡೆಸಲಾಗುತ್ತಿರಲಿಲ್ಲ. ಇತ್ತೀಚೆಗೆ ಈ ಸಿನೆಗೊಗ್‍ನ್ನು ಹಗ್ಗದ ದಾಸ್ತಾನಾಗಿ ಉಪಯೋಗಿಸಲಾಗುತ್ತಿದೆ.