ಮೋಟಾರು ವಾಹನ ಕಾಯಿದೆ ತಿದ್ದುಪಡಿ; ದಂಡದ ಮೊತ್ತ ಕಡಿತಗೊಳಿಸಲು ಸಜ್ಜಾದ ಕೇರಳ ಸರಕಾರ

0
693

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಸೆ.11: ಸಂಸತ್ತು ಹೊರಡಿಸಿರುವ ಮೋಟಾರು ವಾಹನ ಕಾನೂನಿನ ದಂಡದ ಮೊತ್ತವನ್ನು ಕಡಿತಗೊಳಿಸುವ ಕುರಿತು ಕೇರಳ ಸರಕಾರ ಚಿಂತನೆ ನಡೆಸುತ್ತಿದೆ. ಹೊಸ ಮೋಟಾರು ವಾಹನ ಕಾನೂನಿನ ಭಾರೀ ದಂಡವನ್ನು ಈ ತಿಂಗಳು ಹದಿನಾರನೆ ತಾರೀಕುವರೆಗೆ ಕೇರಳದಲ್ಲಿ ವಸೂಲು ಮಾಡುವುದಿಲ್ಲ ಎಂದು ಕೇರಳ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಹೇಳಿದರು. ದಂಡ ಹೆಚ್ಚಳದ ಕುರಿತು ಪರಿಶೀಲನಾ ವರದಿ ನೀಡಲು ಸಾರಿಗೆ ಕಾರ್ಯದರ್ಶಿಗೆ ಸೂಚಿಸಲಾಗಿದೆ.

ಗುಜರಾತ್ ಸಹಿತ ಕೆಲವು ರಾಜ್ಯಗಳು ದಂಡದ ಮೊತ್ತವನ್ನು ಕಡಿಮೆಗೊಳಿಸಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ ದಂಡದ ಮೊತ್ತ ಕಡಿಮೆ ಮಾಡುವುದಾಗಿ ಘೋಷಿಸಿದಾರೆ. ಗುಜರಾತ್ ಸರಕಾರದ ತೀರ್ಮಾನ ಪ್ರಕಾರ ಹೆಲ್ಮೆಟ್ ಇಲ್ಲದ ದ್ವಿಚಕ್ರ ಸವಾರರಿಗೆ 1000 ರೂಪಾಯಿಯಿಂದ 500ರೂಪಾಯಿ ದಂಡವನ್ನು‌ ಕಡಿತ ಗೊಳಿಸಲಾಗಿದೆ. ಸೀಟ್ ಬೆಲ್ಟ್ ಧರಿಸದವರಿಗೆ 500ರೂಪಾಯಿ ದಂಡ. ಲೈಸೆನ್ಸ್ ಇಲ್ಲದ ವಾಹನ ಚಾಲಕರಿಗೆ ದಂಡ ಹಾಗೂ ಶಿಕ್ಷಾ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಹೊಸ ತೀರ್ಮಾನದ ಪ್ರಕಾರ ಲೈಸೆನ್ಸ್ ಇಲ್ಲದೇ ದ್ವಿಚಕ್ರ ವಾಹನ ಚಲಾಯಿಸಿದವರಿಗೆ 2000 ರೂಪಾಯಿ ದಂಡ. ನಾಲ್ಕು ಚಕ್ರದ ವಾಹನ ಚಲಾಯಿಸಿದವರಿಗೆ 3000ರೂಪಾಯಿ ದಂಡವಿಧಿಸಲಾಗುವುದು. ಕೇಂದ್ರ ಸರಕಾರ ಹೊಸ ತಿದ್ದುಪಡಿಯಲ್ಲಿ ಇದು 5000 ರೂಪಾಯಿ ಆಗಿದೆ.