ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.12: ಗೋವಿನ ಹೆಸರಿನಲ್ಲಿ ನಡೆದ ದಾಳಿ ಘಟನೆಗಳ ಕುರಿತಂತೆ ಮೋದಿ ಯಾಕೆ ಮೌನಿಯಾಗಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸದುದ್ದೀನ್ ಉವೈಸಿ ಪ್ರಶ್ನಿಸಿದರು. ಗೋವು ಹಿಂದೂ ಸಹೋದರರಿಗೆ ಪವಿತ್ರ. ಆದರೆ ಸಂವಿಧಾನ ಮನುಷ್ಯನಿಗೆ ಬದುಕುವ ಮತ್ತು ಸಮಾನತೆಯ ಹಕ್ಕನ್ನು ನೀಡಿದೆ. ಈ ವಿಷಯ ಮೋದಿಗೆ ಮನವರಿಕೆಯಾದೀತೆಂದು ಭಾವಿಸುವೆ ಎಂದು ಉವೈಸಿ ಹೇಳಿದರು.
ಉತ್ತರಪ್ರದೇಶದ ಮಥುರಾದ ಸಭೆಯಲ್ಲಿ ಭಾಷಣ ಮಾಡಿದ ನರೇಂದ್ರ ಮೋದಿ ಗೋವಿನ ವಿಷಯದಲ್ಲಿ ಸರಕಾರವನ್ನು ಟೀಕಿಸುವವರು ದೇಶವನ್ನು ನಾಶಪಡಿಸುತ್ತಿದ್ದಾರೆ.ಓಂ, ಗೋವು ಎಂಬ ಮಾತುಗಳು ಕೇಳಿದಾಗ ಕೆಲವರಿಗೆ ದೇಶ ಹದಿನಾರನೆ ಶತಮಾನಕ್ಕೆ ಹೋಗುತ್ತಿದ್ದೆ ಎಂದು ಆಕ್ರೋಶವಿದೆ. ಇಂತಹವರು ದೇಶವನ್ನು ನಾಶಪಡಿಸುವವರು. ಜಾನುವಾರುಗಳ ಸಾಕಣೆ ದೇಶ ಮತ್ತು ಕೃಷಿಯ ಅರ್ಥ ವ್ಯವಸ್ಥೆಗೆ ಎಷ್ಟು ಸಹಾಯಕ ಎಂದು ಈ ಜನರು ಅರಿತಿಲ್ಲ ಎಂದು ಆರೋಪಿಸಿದ್ದರು.ಇದಕ್ಕೆ ಉವೈಸಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.












