ಎನ್‌ಆರ್‌ಸಿ: ಟ್ರಿಬ್ಯೂನಲ್ ವಿರುದ್ಧ ಉನ್ನತ ಸಮಿತಿಯಿಂದ ತನಿಖೆಗೆ ಆಗ್ರಹ

0
436

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.12:ಅಸ್ಸಾಂ ರಾಷ್ಟ್ರೀಯ ಪೌರತ್ವ ಪಟ್ಟಿ ತಯಾರಿಸಲು ತೀರ್ಮಾನವಾದ ಬಳಿಕ ಅದನ್ನು ಭರ್ತಿ ಮಾಡಲು ಸಾವಿರಾರು ಮಂದಿಗೆ ಶಾಜಹಾನ್ ಅಲಿ ಅಹ್ಮದ್ ನೆರವಾಗಿದ್ದರು. ಕಳೆದ ತಿಂಗಳು ಕೊನೆಯ ಪಟ್ಟಿ ಹೊರ ಬಂದಾಗ ಶಾಜಹಾನ್ ಸಹಿತ ಕುಟುಂಬದ 33 ಮಂದಿಯಲ್ಲಿ 30 ಮಂದಿ ಪಟ್ಟಿಯಿಂದ ಹೊರಗಾಗಿದ್ದಾರೆ. ನೈಜ ಭಾರತೀಯರನ್ನೇ ವಿದೇಶಿಗಳೆಂದ ಟ್ರಿಬ್ಯೂನಲ್ ವಿರುದ್ಧ ಉನ್ನತ ಸಮಿತಿಯ ತನಿಖೆಗೆ ಶಾಜಹಾನ್ ಆಗ್ರಹಿಸಿದ್ದಾರೆ.

ಟ್ರಿಬ್ಯೂನಲ್‍ನ ಹೆಚ್ಚಿನ ಉದ್ಯೋಗಿಗಳು ರಾಜಕೀಯ ಒತ್ತಡದಲ್ಲಿ ಭ್ರಷ್ಟಾಚಾರ ನಡೆಸಿದರೆಂದು ಅವರಿಂದ ನ್ಯಾಯ ಸಿಗುವುದಿಲ್ಲ ಎಂದೂ ಅಹ್ಮದ್ ಹೇಳಿದರು. ಅಸ್ಸಾಮಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಟ್ರಿಬ್ಯೂನಲ್‍ನ ಕೆಲಸ ಸರಿಯಾಗಿಲ್ಲ. ಅದರಲ್ಲಿ ಬದಲಾವಣೆಯಾಗಿವೆ ಎಂದು ಅವರು ಆರೋಪಿಸಿದರು.

ರಾಷ್ಟ್ರೀಯ ಪೌರತ್ವ ಪಟ್ಟಿಯಿಂದ ಹೊರಗಾದ ಹತ್ತೊಂಬತ್ತು ಲಕ್ಷ ಮಂದಿಯಲ್ಲಿ ಸರಿಯಾಗಿ ಸರಿಯಾದ ದಾಖಲೆಯನ್ನೇ ಹಾಜರುಪಡಿಸಿದ್ದಾರೆ ಎಂದು ಅಹ್ಮದ್ ಹೇಳಿದರು. ಅಹ್ಮದ್‍ರ ನೇತೃತ್ವದ 5,000 ಸ್ವಯಂಸೇವಕರು ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿಯನ್ನು ಸರಿಪಡಿಸಿ ನೀಡಿದ್ದಾರೆ. ಇವರಲ್ಲಿ ಒಬ್ಬನೇ ಒಬ್ಬ 1971ರ ಮೊದಲಿನ ದಾಖಲೆಯನ್ನು ಹಾಜರುಪಡಿಸದವರಿಲ್ಲ. ತನ್ನ ಸಹಿತ ಕುಟುಂಬದ ಪಟ್ಟಿಯಿಂದ ಹೊರಗಿಡಲಾದ ಮೂವತ್ತು ಮಂದಿ 1934ರಿಂದಿರುವ ದಾಖಲೆಗಳನ್ನು ಹಾಜರುಪಡಿಸಿದ್ದೇವೆ ಎಂದು ಅವರು ತಿಳಿಸಿದರು. ತನ್ನ ಸಹಿತ ಹೆಸರು ಹೊರಗಿಟ್ಟಿರುವುದರಲ್ಲಿ ಸಂಚಿದೆ ಎಂದು ಅಹ್ಮದ್ ಹೇಳಿದರು.