ಸೌದಿ: ಎಲ್ಲ ರೀತಿಯ ವಿಸಿಟಿಂಗ್ ವೀಸಾಗಳಿಗೆ 300 ರಿಯಾಲ್ ಶುಲ್ಕ!

0
1438

ಸನ್ಮಾರ್ಗ ವಾರ್ತೆ

ಜಿದ್ದ,ಸೆ.12: ಸೌದಿ ಅರೇಬಿಯಾದ ಒಂದು ವರ್ಷ ಕಾಲಾವಧಿಯ ಮಲ್ಟಿಪಲ್ ರೀ ಎಂಟ್ರಿ ವೀಸಾಗಳ ಸಹಿತ ಎಲ್ಲ ರೀತಿಯ ವೀಸಾಗಳಿಗೆ 300 ರಿಯಾಲ್ ಶುಲ್ಕ ನಿಗದಿಗೊಳಿಸಲಾಗಿದೆ.

ಹಜ್, ಉಮ್ರಾ, ಟೂರಿಸ್ಟ್, ಬಿಸಿನೆಸ್, ವಿಸಿಟ್, ಟ್ರಾನ್ಸಿಸ್ಟ್, ಮಲ್ಟಿಪಲ್ ಎಂಟ್ರಿ ವೀಸಾಗಳು ಈ ಏಕೀಕೃತ ಶುಲ್ಕದ ವ್ಯಾಪ್ತಿಗೆ ಬರಲಿವೆ. ಕಳೆದ ದಿವಸ ವೀಸಾ ಶುಲ್ಕ ಏಕೀಕರಿಸಲು ನಿರ್ಧರಿಸಲಾಯಿತು. ಇದರ ಭಾಗವಾಗಿ ಉಮ್ರಾ ಸ್ಟಾಂಪಿಂಗ್ ಫೀಸು ಐವತ್ತು ರಿಯಾಲಿನಿಂದ ಇದೀಗ 300 ರಿಯಾಲ್ ಆಗಿದೆ.

ಸಿಂಗಲ್ ಎಂಟ್ರಿ ವೀಸಾದ ಸಮಯ ಒಂದು ತಿಂಗಳು, ಒಂದು ವರ್ಷ ಸಮಯದ ಮಲ್ಟಿಪಲ್ ಎಂಟ್ರಿ ವೀಸಾದಲ್ಲಿ ಮೂರು ತಿಂಗಳವರೆಗೆ ಉಳಿಯಬಹುದು. ಟ್ರಾನ್ಸಿಸ್ಟ್ ವೀಸಾಕ್ಕೆ ಸಮಯ 96 ಗಂಟೆ, ಇದೇ ವೇಳೆ ಉಮ್ರಾಕ್ಕೆ ಇದ್ದ ಹೆಚ್ಚುವರಿ 2000 ರಿಯಾಲ್ ಶುಲ್ಕ ತೆರವುಗೊಳಿಸಲಾಗಿದೆ.