ಅಮಿತ್ ಶಾರ ಹಿಂದಿ ಹೇಳಿಕೆಗೆ ವ್ಯಾಪಕ ವಿರೋಧ

0
627

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ.ಸೆ.14: ಹಿಂದಿ ದಿನಾಚರಣೆಯಲ್ಲಿ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾಮ್ ಯೆಚೂರಿ ಸಹಿತ ಅನೇಕ ನಾಯಕರು ಹೇಳಿಕೆಯನ್ನು ವಿರೋಧಿಸಿದ್ದಾರೆ.

ಅಮಿತ್ ಶಾ ಹೇಳಿಕೆ ಆತಂಕ ಸೃಷ್ಟಿಸಿದೆ ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಹೇಳಿದರು. ಹಿಂದಿ ಭಾಷಾ ಹೇರಿಕೆಯ ವಿರುದ್ಧ ನಾವು ಹಲವು ಕಾಲದಿಂದ ಹೋರಾಡುತ್ತಿದ್ದೇವೆ. ಪಾರ್ಟಿಯ ಸಭೆಯ ಬಳಿಕ ಅಮಿತ್ ಶಾರ ಹೇಳಿಕೆಯ ಕುರಿತು ಮುಂದಿನ ಕ್ರಮವನ್ನು ಸ್ವೀಕರಿಸುತ್ತೇವೆ ಎಂದು ಅವರು ಹೇಳಿದರು. ಎಲ್ಲ ಭಾಷೆಗಳಿಗೂ ಸಮಾನ ಗೌರವ ಸಿಗಬೇಕೆಂದು ಮಮತಾ ಬ್ಯಾನರ್ಜಿ ಶಾರಿಗೆ ನೆನಪಿಸಿದ್ದಾರೆ. ಎಲ್ಲ ಭಾಷೆಯನ್ನೂ ಕಲಿಯಬೇಕು. ಆದರೆ, ಮಾತೃಭಾಷೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಮಮತಾ ಹೇಳಿದರು.