ಹೊಸದಿಲ್ಲಿ,ಸೆ.14: ದಿಲ್ಲಿಯ ಅತೀ ಸುರಕ್ಷಿತ ವಲಯದ ಬಾಬರ್ ರಸ್ತೆಯ ಸೂಚನಾ ಫಲಕವನ್ನು ಕಪ್ಪು ಮಸಿ ಬಳಿದು ಹಿಂದೂ ಸೇನೆ ಅಳಿಸಿ ಹಾಕಿದೆ. ರಸ್ತೆಯ ಹೆಸರನ್ನು ಶೀಘ್ರ ಬದಲಾಯಿಸಬೇಕೆಂದು ಆಗ್ರಹಿಸಿದೆ.
ಕನ್ನಾಟ್ ಪ್ಲೇಸ್ನ ಸಮೀಪ ದಿಲ್ಲಿ ನಗರದ ಹೃದಯ ಭಾಗದಲ್ಲಿ ಮೊಗಲ್ ದೊರೆ ಬಾಬರನ ಹೆಸರಿನಲ್ಲಿ ರಸ್ತೆಯಿದ್ದು ಭಾರತಕ್ಕೆ ದಂಡೆತ್ತಿ ಬಂದಿರುವ ಬಾಬರನ ಹೆಸರಿನಲ್ಲಿ ರಸ್ತೆ ಇರಬಾರದು. ಇದನ್ನು ನಾವು ಒಪ್ಪುವುದಿಲ್ಲ. ಬೇರೆ ಭಾರತೀಯ ಪ್ರಮುಖ ವ್ಯಕ್ತಿಗಳ ಹೆಸರನ್ನು ಇರಿಸಬೇಕೆಂದು ಹಿಂದೂ ಸೇನೆ ಕಾರ್ಯಕರ್ತರು ಹೇಳಿದ್ದಾರೆ. ಆದರೆ ನಾಮಫಲಕಕ್ಕೆ ಮಸಿ ಬಳಿದವರ ವಿರುದ್ಧ ಕ್ರಮ ಜರಗಿಸಲಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.












